
ತುಮಕೂರು(ಡಿ.12): ಇತ್ತೀಚಿಗಷ್ಟೆ ಅನಾರೋಗ್ಯದಿಂದ ಮೃತಪಟ್ಟ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ
ಹೊಸದೊಂದು ಗೊಂದಲ ಎದ್ದಿದೆ. ಅವರು ಹುಟ್ಟಿದ್ದು ಮೇಲುಕೋಟೆಯಲ್ಲೋ,ಮೈಸೂರಿನಲ್ಲೂ ಎಂಬ ಗೊಂದಲಗಳು ಇರುವಾಗ. ಅವರು ಅವೆರಡೂ ಸ್ಥಳಗಳಲ್ಲಿ ಹುಟ್ಟಲಿಲ್ಲ ಎನ್ನುತ್ತಿದ್ದಾರೆ ಈ ಗ್ರಾಮಸ್ಥರು. ಜಯಾ ಜನ್ಮಸ್ಥಳ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಯ್ಯನಹಳ್ಳಿ ಈ ಊರಿನ ಗ್ರಾಮಸ್ಥರ ವಾದ. ಅಯ್ಯನಳ್ಳಿಯಲ್ಲಿ ಅಯ್ಯಂಗಾರ ಕುಟುಂಬದ ಬಂಗಲೆಯೊಂದಿದ್ದು ಅಮ್ಮ ಹುಟ್ಟಿದ್ದು ಇಲ್ಲಿಯೇ ಎಂದು ಹೇಳುತ್ತಿದ್ದಾರೆ. ಜಯಲಲಿತಾ ಅವರ ತಾತ ಶ್ರೀನಿವಾಸಾಚಾರ್ ಹಾಗೂ ತಂದೆ ಬಾಲಕೃಷ್ಣಚಾರ್ ನಮ್ಮ ಊರಿನ ಸ್ಥಳೀಯರು ಎನ್ನುತ್ತಿದ್ದಾರೆ ಇವರು. ಬಾಲಕೃಷ್ಣಾಚಾರ್ ವೇದಾವತಿಯನ್ನು ಮದುವೆಯಾಗಿದ್ದು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇತ್ತು. ಬಾಲಕೃಷ್ಣಾಚಾರ್ ಹಾಗೂ ವೇದಾವತಿ ದಂಪತಿಗೆ ಹುಟ್ಟಿದ ಹೆಣ್ಣುಮಗಳೇ ಜಯಲಲಿತಾ ಎನ್ನಲಾಗಿದೆ. ಆದರೆ ಜಯಲಲಿತಾ ಅಯ್ಯನಳ್ಳಿಯಲ್ಲಿ ಹುಟ್ಟಿದ್ದಕ್ಕೆ ಯಾವುದೇ ದಾಖಲೆ ಲಭ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.