ಭಾರತದೊಂದಿಗೆ ಹದಗೆಡುತ್ತಿರುವ ಸಂಬಂಧ; ವಿಶ್ವಸಂಸ್ಥೆ ಮೊರೆ ಹೋದ ಪಾಕ್

By Suvarna Web DeskFirst Published Dec 7, 2016, 1:09 PM IST
Highlights

ಭಾರತ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದರ ಜೊತೆಗೆ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕ್ ದೂರಿದೆ.

ವಿಶ್ವಸಂಸ್ಥೆ(ಡಿ.07): ಉಭಯ ರಾಷ್ಟ್ರಗಳ ನಡುವೆ ಹದಗೆಟ್ಟಿರುವ ಸಂಬಂಧವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ನೈತಿಕ ಜವಾಬ್ದಾರಿಯ ಮೇರೆಗೆ ಮಧ್ಯಪ್ರವೇಶಿಸಬೇಕಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ಮನವಿ ಮಾಡಿದೆ.  

ಭಾರತವು ಪಾಕ್‌'ನೊಂದಿಗಿನ ಸಂಬಂಧಕ್ಕೆ ತೆರೆ ಎಳೆದಿದೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದು ಪಾಕ್ ಹೇಳಿದೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರ ವಿಶೇಷ ಸಹಾಯಕ ಸೈಯದ್ ತಾರಿಕ್ ತೆಮಿ ಅವರು ವಿಶ್ವಸಂಸ್ಥೆಯ ಕಾರ್ಯದರ್ಶಿ ಅಂಟೋನಿ ಗುಟ್ಟೇರ್ಸ್, ಉಪ ಕಾರ್ಯದರ್ಶಿ ಜಾನ್ ಎಲಿಸ್ಸನ್ ಮತ್ತು ಉಪ ಕಾರ್ಯದರ್ಶಿ ಜೆಫ್ರಿ ಫಾಲ್ಟ್‌ಮನ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ.

ಭಾರತ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದರ ಜೊತೆಗೆ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕ್ ದೂರಿದೆ.

click me!