ಕೊನೆಗೂ ಭಾರತಕ್ಕೆ ಮರಳಿದ ಉಜ್ಮಾ

By Suvarna Web DeskFirst Published May 25, 2017, 4:18 PM IST
Highlights

ಪಾಕಿಸ್ತಾನದಲ್ಲಿ ತನಗೆ ಬಂದೂಕು ತೋರಿಸಿ ಬಲವಂತವಾಗಿ ಪಾಕಿಸ್ತಾನದ ವ್ಯಕ್ತಿಯೊಡನೆ ಮದುವೆ ಮಾಡಲಾಯಿತು ಎಂದು ಆರೋಪಿಸಿದ್ದ ಭಾರತೀಯ ಮೂಲದ ಯುವತಿ ಉಜ್ಮಾ ಇಂದು ಬೆಳಿಗ್ಗೆ ಭಾರತಕ್ಕೆ ಮರಳಿದ್ದಾರೆ.  ಭಾರತಕ್ಕೆ ಮರಳಲು ಇಸ್ಲಮಾಬಾದ್ ಹೈಕೋರ್ಟ್  ಅನುಮತಿ ನೀಡಿದೆ.

ನವದೆಹಲಿ (ಮೇ.25): ಪಾಕಿಸ್ತಾನದಲ್ಲಿ ತನಗೆ ಬಂದೂಕು ತೋರಿಸಿ ಬಲವಂತವಾಗಿ ಪಾಕಿಸ್ತಾನದ ವ್ಯಕ್ತಿಯೊಡನೆ ಮದುವೆ ಮಾಡಲಾಯಿತು ಎಂದು ಆರೋಪಿಸಿದ್ದ ಭಾರತೀಯ ಮೂಲದ ಯುವತಿ ಉಜ್ಮಾ ಇಂದು ಬೆಳಿಗ್ಗೆ ಭಾರತಕ್ಕೆ ಮರಳಿದ್ದಾರೆ.  ಭಾರತಕ್ಕೆ ಮರಳಲು ಇಸ್ಲಮಾಬಾದ್ ಹೈಕೋರ್ಟ್  ಅನುಮತಿ ನೀಡಿದೆ.

ಉಜ್ಮಾ ಭಾರತಕ್ಕೆ ಮರಳಲು ಪಾಕಿಸ್ತಾನದಲ್ಲಿರುವ ಇಂಡಿಯನ್ ಹೈ ಕಮಿಷನ್ ನೆರವು ಕೇಳಿದ್ದು, ಪಾಕ್ ಪೊಲೀಸ್ ಬೆಂಗಾವಲಿನಲ್ಲಿ ವಾಘಾ ಗಡಿ ದಾಟಿಸಲಾಯಿತು. ನಂತರ ಭಾರತದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದರು. ಇಂದು ಸಂಜೆ ವೇಳೆಗೆ ಉಜ್ಮಾ ತನ್ನೂರಿಗೆ ತೆರಳುವ ಸಾಧ್ಯತೆಯಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ, ಉಜ್ಮಾರಿಗೆ ಸ್ವಾಗತ ಕೋರಿದ್ದಾರೆ. ಭಾರತದ ಮಗಳಿಗೆ ಸ್ವಾಗತ. ನಡೆದುದರ ಬಗ್ಗೆ ಕ್ಷಮೆ ಕೋರುತ್ತೇನೆ ಎಂದು ಸುಷ್ಮಾ ಸ್ವರಾಜ್ ಟ್ವೀಟಿಸಿದ್ದಾರೆ.

 

Uzma - Welcome home India's daughter. I am sorry for all that you have gone through.

— Sushma Swaraj (@SushmaSwaraj) May 25, 2017
tags
click me!