
ಬೆಂಗಳೂರು : ಬಂಗಾಳಕೊಲ್ಲಿ ಹಾಗೂ ಉತ್ತರದಿಂದ ಶೀತ ಮಾರುತಗಳು ಬೀಸಲು ಆರಂಭವಾಗಿದ್ದು, ಸಂಜೆಯಾಗುತ್ತಿದ್ದಂತೆ ಉದ್ಯಾನ ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿ ಜನ ತತ್ತರಿಸುವಂತಾ ಗಿದೆ. ಹಿಂಗಾರು ಆರಂಭವಾಗದಿರುವುದು ನಗರದಲ್ಲಿ ಚಳಿ ಪ್ರಮಾಣದ ಏರಿಕೆಗೆ ಕಾರಣವಾಗಿದೆ. ಹಗಲು ವೇಳೆಯಲ್ಲಿ ಶುಭ್ರಾಕಾಶದಿಂದ ಬಿಸಿಲ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನು ಸೂರ್ಯಾಸ್ತವಾಗುತ್ತಿದ್ದಂತೆ ಶೀತಗಾಳಿಯಿಂದ ಮೈಕೊರೆ ಯುತ್ತದೆ.
ಇದರಿಂದ ನಗರದ ಜನ ಬೆಚ್ಚನೆಯ ಉಡುಪು ಗಳಿಲ್ಲದೇ ಮನೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಇನ್ನು ನಗರದ ಹೊರವಲಯಕ್ಕೆ ಹೋಲಿಸಿದರೆ ಕೇಂದ್ರ ಭಾಗದಲ್ಲಿ ಚಳಿ ಪ್ರಮಾಣ ಕಡಿಮೆಯಾಗಿದ್ದು, ನಗರದಲ್ಲಿ ವಾಹನಗಳ ಮತ್ತು ಜನಸಂಖ್ಯೆ, ಗಗನ ಚುಂಬಿ ಕಟ್ಟಡಗಳು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ.
12 ಡಿಗ್ರಿಸೆಲ್ಸಿಯಸ್‌ಗೆ ಇಳಿದ ಉಷ್ಣಾಂಶ: ನಗರದಲ್ಲಿ ಒಂದು ವಾರದ ಉಷ್ಣಾಂಶವನ್ನು ಗಮನಿಸಿದರೆ, ಅ.24 ಬುಧವಾರ ನಗರದಲ್ಲಿ ಅತಿ ಕಡಿಮೆ 12.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರದಿಂದ ಬೀಸುತ್ತಿರುವ ಗಾಳಿಯ ಒತ್ತಡ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಮತ್ತೆ ಕಳೆದೆರಡು ದಿನಗಳಿಂದ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಶನಿವಾರ ಬೆಳಗ್ಗೆ ಕನಿಷ್ಠ ಉಷ್ಣಾಂಶ 16.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮಳೆ ಬಂದರೆ ಚಳಿ ಕಡಿಮೆ: ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಇನ್ನು ಹಿಂಗಾರು ಆರಂಭವಾಗಿಲ್ಲ. ನವೆಂಬರ್ ಆರಂಭದಲ್ಲಿ ಹಿಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾ ನ ಇಲಾಖೆ ಮಾಹಿತಿ ನೀಡಿದೆ. ಮಳೆ ಬೀಳುವ ಲಕ್ಷಣಗಳು ಕಂಡು ಬಂದರೆ ನಗರದಲ್ಲಿ ಶೀತಗಾಳಿ ಹಾಗೂ ಚಳಿಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ. ಇಲ್ಲವಾದ ರೆ, ಶೀತಗಾಳಿ ಹಾಗೂ ಚಳಿಯ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ವರದಿ : ವಿಶ್ವನಾಥ ಮಲೇಬೆನ್ನೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.