ಪ್ರತಾಪ್ ಸಿಂಹ ಬಂಧನ ಖಂಡಿಸಿ ಸಂಸತ್'ನಲ್ಲೂ ಹೋರಾಟ ಮಾಡುತ್ತೇವೆ: ಅನಂತ್ ಕುಮಾರ್

Published : Dec 04, 2017, 09:41 PM ISTUpdated : Apr 11, 2018, 12:49 PM IST
ಪ್ರತಾಪ್ ಸಿಂಹ ಬಂಧನ ಖಂಡಿಸಿ ಸಂಸತ್'ನಲ್ಲೂ ಹೋರಾಟ ಮಾಡುತ್ತೇವೆ: ಅನಂತ್ ಕುಮಾರ್

ಸಾರಾಂಶ

ಸಿಎಂ ಸಿದ್ದರಾಮಯ್ಯ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್​ ಸಿಂಹರನ್ನು ಬಂಧಿಸಿದ್ದೇ ತಪ್ಪು. ಸಂಸತ್'ನಲ್ಲೂ ಇದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ  ಅನಂತ ಕುಮಾರ್​ ಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರು (ಡಿ.04): ಸಿಎಂ ಸಿದ್ದರಾಮಯ್ಯ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ.  ಸಂಸದ ಪ್ರತಾಪ್​ ಸಿಂಹರನ್ನು ಬಂಧಿಸಿದ್ದೇ ತಪ್ಪು. ಸಂಸತ್'ನಲ್ಲೂ ಇದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ  ಅನಂತ ಕುಮಾರ್​ ಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.

ಹುಣಸೂರಿನಲ್ಲಿ ಹನುಮಜಯಂತಿಗೆ ಅನುಮತಿ ನೀಡಿಲ್ಲ. ಟಿಪ್ಪು ಜಯಂತಿ,  ಈದ್ ಮಿಲಾದ್ ಮೆರವಣಿಗೆ ನಡೆಯಬಹುದು. ಹುನುಮ ಜಯಂತಿ ಮೆರವಣಿಗೆ ಮಾತ್ರ ಮಾಡಬಾರದು ಇದು ಎಷ್ಟು ಸರಿ?  ಪುರಾಣದಲ್ಲಿ ಕರ್ನಾಟಕವನ್ನ ಹುನುಮನ ನಾಡು ಎಂದು ಕರೆದಿದ್ದಾರೆ. ಕರ್ನಾಟಕದಲ್ಲಿ ಕೋಮು ಸೌಹಾರ್ದತೆ ಕದಡಲು ಮುಖ್ಯ ಕಾರಣ ಸಿಎಂ ಸಿದ್ದರಾಮಯ್ಯ ಎಂದು ಅನಂತ್ ಕುಮಾರ್ ಆರೋಪಿಸಿದ್ದಾರೆ.

ರಾಜ್ಯ ಸರಕಾರ  ಒಂದು‌ ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುತ್ತಿದೆ. 19 ಹಿಂದೂ ಯುವಕರ ಕಗ್ಗೊಲೆಯಾಗಿದೆ.  ಹತ್ಯೆಯ ಹಿಂದೆ ಹಲವು ಸಂಘಟನೆಗಳ ಕೈವಾಡವಿದ್ರೂ ರಾಜ್ಯ ಸರ್ಕಾರ ಸುಮ್ಮ‌ನಿದೆ. ಹತ್ಯೆಯಾದವರ ಮನೆಗೆ ಸೌಜನ್ಯಕ್ಕೂ  ಸಿಎಂ ಸಿದ್ದರಾಮಯ್ಯ ಭೇಟಿ ನೀಡಿಲ್ಲ.  ಸಿಎಂ ಆಡಳಿತದಲ್ಲಿ ಯಾವತ್ತು ಕಾನೂನು ಸುವ್ಯವಸ್ಥೆಗೆ ರಜೆ ಘೋಷಿಸಲಾಗಿದೆ.  ಸಂಸದರನ್ನ ಬಂಧನ ‌ಮಾಡಿದ ಕೊಡಲೇ ಸಭಾಪತಿಗೆ ದೂರು ನೀಡಬೇಕು. ಇದರ ಬಗ್ಗೆ ನಾವು ಸುಮ್ಮನಿರಲ್ಲ. ಜನರ ನಡುವೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ₹81 ಲಕ್ಷ ಪರಿಹಾರ ಪಡೆದ ಭಾರತೀಯ ಮೂಲದ ಉದ್ಯೋಗಿ
ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದುಹೋದರೆ ತಕ್ಷಣ ಮಾಡಬೇಕಾದ ಕೆಲಸವಿದು, ತಿಳ್ಕೊಳ್ಳಿ!