
ಹೊಸನಗರ (ಅ.08): ರಾಜ್ಯದಲ್ಲಿ ಯಾವ ಮಠದ ಮೇಲೆ ಮಾತ್ರವಲ್ಲ, ವಿರೋಧ ಪಕ್ಷಗಳ ಮೇಲೂ ಮಾಡದಷ್ಟುದೌರ್ಜನ್ಯವನ್ನು ರಾಮಚಂದ್ರಾಪುಮಠದ ಮೇಲೆ ಮಾಡಲಾಗುತ್ತಿದೆ ಎಂದು ರಾಮಾಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಆರೋಪಿಸಿದರು.
ಶ್ರೀ ರಾಮಾಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮತ್ತು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ಸರ್ಕಾರ ಮಾಡುತ್ತಿರುವ ಹುನ್ನಾರದ ವಿರುದ್ಧ ಶ್ರೀ ರಾಮಾಚಂದ್ರಾಪುರ ಮಠದಲ್ಲಿ ಹಮ್ಮಿಕೊಂಡ ಶಪಥಪರ್ವದ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮೇಲೆ ವೈಯಕ್ತಿಕವಾಗಿ ಆಕ್ರಮಣ ನಡೆದಾಗಲು ಆ ನೋವನ್ನು ತಡೆದುಕೊಂಡೆ. ಆದರೆ ಶ್ರೀಮಠದ ಮೇಲೆ ಆಕ್ರಮಣವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಮಠವನ್ನು ಭಕ್ತರ ಹಣದಿಂದ ಕಟ್ಟಲಾಗಿದೆ. ಮಾತ್ರವಲ್ಲ ಸಕಾಲಕ್ಕೆ ತೆರಿಗೆ ಪಾವತಿಸಲಾಗಿದೆ. ಒಂದು ನಯಾ ಪೈಸೆ ಕೂಡ ದುರ್ಬಳಕೆಯಾಗಿಲ್ಲ. ಸದ್ಯದಲ್ಲೆ ಶ್ರೀಮಠಕ್ಕೆ ಐಎಸ್‌ಒ ಸರ್ಟಿಫಿ ಕೇಟ್ ಸಿಗಲಿದೆ ಎಂದರು.
ಜನಮತ ಗಣನೆ ನಡೆಸಲಿ
ಗೋಕರ್ಣವನ್ನು ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ರಾಮಚಂದ್ರಾಪುರಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಹೊರಟಿರುವ ಸರ್ಕಾರ ಮೊದಲು ಶ್ರೀಮಠದ ಭಕ್ತರ ಜನಮತ ಗಣನೆ ನಡೆಸಲಿ ಎಂದು ಸವಾಲು ಹಾಕಿದರು.
ಸರ್ಕಾರದ ಕ್ರಮವನ್ನು ವಿರೋಧಿಸಿ ಇಂದು ರಾಜ್ಯದ ವಿವಿಧ ಮೂಲೆಗಳಲ್ಲಿ 5 ಲಕ್ಷಕ್ಕ್ಕೂ ಹೆಚ್ಚು ಭಕ್ತರು ಉಪವಾಸ ನಡೆಸುತ್ತಿದ್ದಾರೆ. ಶ್ರೀಮಠದಲ್ಲೂ ನಡೆಯುತ್ತಿರುವ ಮೌನ ಪ್ರತಿಭಟನೆ, ಉಪವಾಸ ಸತ್ಯಾಗ್ರಹದ ಮೂಲಕ ನಡೆಸುವ ಶಪಥಪರ್ವ ರಾಜ್ಯ ಸರ್ಕಾರಕ್ಕೆ ಭಕ್ತರು ಕೊಡುತ್ತಿರುವ ಎಚ್ಚರಿಕೆ ಎಂದರು.
ನಮಗೆ ತಾಳ್ಮೆ, ಸಂಯಮವಿದೆ. ಆದರೆ ಎಷ್ಟುಅಂತ ದೌರ್ಜನ್ಯ ತಡೆದುಕೊಂಡಿರಲು ಸಾಧ್ಯ. ಭಕ್ತರ ತಾಳ್ಮೆಗೂ ಒಂದು ಮಿತಿಯಿದೆ. ಆದರೂ ಮೌನ ಪ್ರತಿಭಟನೆ ಮೂಲಕ ಸರ್ಕಾರವನ್ನು ಗಮನಸೆಳೆಯುವ ಪ್ರಯತ್ನ ಮಾಡಲಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಶ್ರೀಮಠದ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಲಿ. ವಿವಿಧ ಇಲಾಖೆಯಿಂದ ಆಗುತ್ತಿರುವ ಕಿರುಕುಳದಿಂದ ಮುಕ್ತಿ ನೀಡಲಿ ಎಂದರು ಆಗ್ರಹಿಸಿದರು.
ಸ್ವಾಗತಾರ್ಹ
ಗೋಕರ್ಣ ದೇವಸ್ಥಾನ ಮತ್ತು ಶ್ರೀಮಠದ ಸಂಬಂಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ಮತ್ತು ಮುಜರಾಯಿ ಸಚಿವ ಲಮಾಣಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದರು. ಆದರೆ ಗೋಕರ್ಣ ಮತ್ತು ಶ್ರೀಮಠದ ವಿರುದ್ಧ ಇರುವ ಫೈಲ್‌ನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.