
ದಾವಣಗೆರೆ (ಅ.08): ಅವರದ್ದೇ ಸರ್ಕಾರ ಇದೆ. ಅವರು ಹಾಕಿಸಿಕೊಂಡ ಅಧಿಕಾರಿಗಳೇ ಇದ್ದಾರೆ. ನಾನೇನಾದ್ರೂ ಹಿಂದೆ ಸಚಿವನಾಗಿದ್ದಾಗ ತಪ್ಪು ಮಾಡಿದ್ರೆ ತನಿಖೆ ಮಾಡಿಸಿ ಜೈಲಿಗೆ ಕಳಿಸಲಿ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಸವಾಲು ಹಾಕಿದವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೋರ್ ವೆಲ್ ಕೊರೆಯಿಸುವ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಸಚಿವ ಮಲ್ಲಿಕಾರ್ಜುನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡುವುದ ಕಲಿಯಬೇಕೆಂದು ಸಲಹೆ ಮಾಡಿದರು.
ಈ ಹಿಂದೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ತಮ್ಮ ಪಾತ್ರವಿದೆಯೆಂದು ಆರೋಪ ಮಾಡಿದ್ದರು. ಹಾಗಿದ್ದರೆ ನನ್ನನ್ನೇಕೆ ಬಂಧಿಸಲಿಲ್ಲ? ಕೊಳವೆ ಬಾವಿ ಕೊರೆಯಿಸದೆ ನಕಲಿ ಬಿಲ… ತೆಗೆದುಕೊಂಡಿರುವುದನ್ನು ಸಾಕ್ಷಿ ಸಮೇತವಾಗಿ ತೋರಿಸಲಿ ಎಂದು ಸವಾಲು ಹಾಕಿದರು.
ಎಸ್.ಎಸ್. ಮಲ್ಲಿಕಾರ್ಜುನ ಏನು ಮಾಡ್ತಿದ್ದಾರೆ, ಯಾವ ಯಾವ ಕಾಮಗಾರಿಯಲ್ಲಿ ಏನೇನು ಆಗಿದೆ ಎಂಬುದು ನನಗೆ ಗೊತ್ತು. ಸಂದರ್ಭ ಬಂದಾಗ ಬಯಲಿಗೆಳೆಯುತ್ತೇನೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿವೆ. ಅನಾವಶ್ಯಕ ಮಾತುಗಳ ನಿಲ್ಲಿಸಿ ಮೊದಲು ಜಿಲ್ಲೆ ಸುತ್ತಿ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸೂಚಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಜಯಪ್ರಕಾಶ್ ಕೊಂಡಜ್ಜಿ, ಸಂಕೋಳ್ ಚಂದ್ರಶೇಖರ್, ಹೇಮಂತ್ ಕುಮಾರ್, ರಾಜಶೇಖರ್, ಕಲ್ಬುರ್ಗಿ ಪ್ರಭು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.