ನೀರು ಕಣ್ಣೀರು: ನೀರಿಗಾಗಿ ಮಕ್ಕಳನ್ನು ಶಾಲೆ ಬಿಡಿಸಲೂ ಸಿದ್ಧ ಈ ಊರಿನ ಜನ!

Published : Feb 16, 2017, 05:45 AM ISTUpdated : Apr 11, 2018, 12:47 PM IST
ನೀರು ಕಣ್ಣೀರು: ನೀರಿಗಾಗಿ ಮಕ್ಕಳನ್ನು ಶಾಲೆ ಬಿಡಿಸಲೂ ಸಿದ್ಧ ಈ ಊರಿನ ಜನ!

ಸಾರಾಂಶ

ಅಮಚವಾಡಿ ಗ್ರಾಮವೇನೂ ತುಂಬಾ ದೂರವಿಲ್ಲ. ಜಿಲ್ಲಾ ಕೇಂದ್ರಕ್ಕೆ ಕೇವಲ 10 ಕಿ.ಮೀ. ದೂರ. ಊರಿಗೆ 4 ಕೊಳವೆ ಬಾವಿಗಳಿವೆ. ಮೂರು ಕೆಟ್ಟಿದ್ದರೆ, ಒಂದು ಮಾತ್ರ ಕೆಲಸ ಮಾಡುತ್ತಿದೆ. ಕೆಟ್ಟಿರುವ ಮೋಟರ್​'ಗಳನ್ನು ರಿಪೇರಿ ಮಾಡಿಸಲೂ ಪಂಚಾಯ್ತಿಯಲ್ಲಿ ದುಡ್ಡಿಲ್ಲವಂತೆ.

ಚಾಮರಾಜನಗರ, ಅದು ಬರದ ಜಿಲ್ಲೆಯೂ ಹೌದು, ಹಸಿರು ಜಿಲ್ಲೆಯೂ ಹೌದು. ಆದರೆ ಈಗ ಅಲ್ಲಿ ಚಳಿಗಾಲ ಮುಗಿಯೋಕೆ ಮುಂಚೇನೇ ಹಾಹಾಕಾರ ಎದ್ದಿದೆ. ಅಲ್ಲಿನ ಜನರ ಕಷ್ಟ ಕೇಳಬೇಕು. ಕಣ್ಣಲ್ಲಿ ನೀರು ಬರುತ್ತೆ. ಅದು ನೀರು ಕಣ್ಣೀರು.

ಇಲ್ಲಿ ಕುಡಿಯೋಕೆ ಬಿಡಿ, ಇಲ್ಲಿ ತೊಳೆದುಕೊಳ್ಳೋಕೂ ನೀರಿಲ್ಲದೆ ಪರದಾಡುತ್ತಿದ್ದಾರೆ ಜನ. ಅನುಭವಿಸುತ್ತಿರುವ ಸಂಕಟಗಳು ಇವರ ಸಂಕೋಚವನ್ನು ದೂರ ಮಾಡಿವೆ.ಇದು ಚಾಮರಾಜ ನಗರ ಜಿಲ್ಲೆಯ ಅಮಚವಾಡಿ ಗ್ರಾಮ.

ಇಲ್ಲಿನ ಜನಕ್ಕೆ ನೀರಿನ ಸಂಕಟ ಎಷ್ಟರಮಟ್ಟಿಗೆ ಆಗಿದೆಯೆಂದರೆ ನೀರಿಗಾಗಿ ಮಕ್ಕಳನ್ನು ಸ್ಕೂಲು ಬಿಡಿಸಲೂ ಸಿದ್ಧ ಎನ್ನುತ್ತಿದ್ದಾರೆ ಜನರು.

ಇಲ್ಲಿ ಸ್ನಾನಕ್ಕೂ ನೀರಿಲ್ಲ, ಇದೆಲ್ಲದರ ಜೊತೆಗೆ ಇಲ್ಲಿ ರಾಜಕೀಯವೂ ಬೆರೆತುಕೊಂಡಿದೆ. ನೀರಿಗಾಗಿ ಅರ್ಧರಾತ್ರಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಈ ಗ್ರಾಮದಲ್ಲಿದೆ.

ಅಮಚವಾಡಿ ಗ್ರಾಮವೇನೂ ತುಂಬಾ ದೂರವಿಲ್ಲ. ಜಿಲ್ಲಾ ಕೇಂದ್ರಕ್ಕೆ ಕೇವಲ 10 ಕಿ.ಮೀ. ದೂರ. ಊರಿಗೆ 4 ಕೊಳವೆ ಬಾವಿಗಳಿವೆ. ಮೂರು ಕೆಟ್ಟಿದ್ದರೆ, ಒಂದು ಮಾತ್ರ ಕೆಲಸ ಮಾಡುತ್ತಿದೆ. ಕೆಟ್ಟಿರುವ ಮೋಟರ್​'ಗಳನ್ನು ರಿಪೇರಿ ಮಾಡಿಸಲೂ ಪಂಚಾಯ್ತಿಯಲ್ಲಿ ದುಡ್ಡಿಲ್ಲವಂತೆ.

ಈ ಊರಿಗೆ ನೀರು ಬಂದು ಎರಡು ತಿಂಗಳಾಗಿದೆ. ಕಾರ್ಮಿಕರು ಕೂಲಿ ಕೆಲಸ ಬಿಟ್ಟಿದ್ದಾರೆ. ಮಕ್ಕಳು ಸ್ಕೂಲು ಬಿಟ್ಟಿದ್ದಾರೆ. ಹೆಂಗಸರು ನಿದ್ದೆ ಬಿಟ್ಟಿದ್ದಾರೆ. ನೀರಿಗಾಗಿ ಸುತ್ತಾಡುವುದೇ ಇವರ ಉದ್ಯೋಗವಾಗಿದೆ! ದುರಂತವೆಂದರೆ ಈ ಊರಿಗಾಗಿ ಪಂಚಾಯ್ತಿಯವರು ಕೊರೆಸಿರುವ ಬಾವಿಗಳ ಸಂಖ್ಯೆ 50ಕ್ಕೂ ಹೆಚ್ಚು. ಆದರೆ, ಶಿವರಾತ್ರಿ ಹತ್ತಿರದಲ್ಲದ್ದಾಗಲೇ ನೀರಿಲ್ಲದೆ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಶಶಿಧರ ಕೆ.ವಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ