
ಭೀವಂಡಿ, ಮಹಾರಾಷ್ಟ್ರ (ಫೆ.16): ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಥಾಣೆಯ ಭೀವಂಡಿಯಲ್ಲಿ ಮನೋಜ್ ಮಹತ್ರೆ ಎಂಬುವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ಯೆಯಾದ ಮನೋಜ್ ಭಿವಾಂಡಿ-ನಿಜಾಮ್‌ಪುರ್ ಪುರಸಭೆಯ ಕಾಂಗ್ರೆಸ್ ಮುಖಂಡ. ಭದ್ರತೆ ಕಾರಣಗಳಿಂದಾಗಿಯೇ ಭಿವಂಡಿ ತಾಲೂಕಿನ ಕಲ್ವಾ ಪ್ರದೇಶವನ್ನು ಮನೋಜ್ ತೊರೆದಿದ್ದರು. ನಂತರ ಭೀವಂಡಿ ನಗರದ ಓಸ್ವಾಲ್ ವಾಡಿಗೆ ವಾಸ್ತವ್ಯ ಬದಲಾಯಿಸಿದ್ದರು.
ಆದರೆ, ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊದಲು ಮನೋಜ್ ಬೆನ್ನಿಗೆ ಗುಂಡು ಹಾರಿಸಿದ್ದಾರೆ. ನಂತರ ಮನೋಜ್ ಕೆಳಗೆ ಬಿದ್ದಿದ್ದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಹಿಂದೆ ಕೂಡ ಮನೋಜ್ ಮೇಲೆ ಕೊಲೆ ಯತ್ನಗಳು ನಡೆದಿದ್ದವು. ಆದರೆ, ಈಗ ಯಾವ ಕಾರಣಕ್ಕೆ ಮನೋಜ್ ಕೊಲೆ ಮಾಡಲಾಗಿದೆ ಎಂಬುವುದು ತಿಳಿದುಬಂದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.