ನಾನೇಕೆ ಡಿಕೆಶಿ ಇಲಾಖೆಯಲ್ಲಿ ಕೈಹಾಕಲಿ: ರೇವಣ್ಣ ಗರಂ

By Web DeskFirst Published Jun 14, 2018, 7:23 PM IST
Highlights

ನಾನು ಬೇರೆ ಇಲಾಖೆಯಲ್ಲಿ ಯಾಕೆ ಹಸ್ತಕ್ಷೇಪ ಮಾಡಲಿ? ಅಂತಹ ಪ್ರಮೇಯ ನನಗಿನ್ನು ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. ಜಲಸಂಪನ್ಮೂಲ‌  ಇಲಾಖೆ ವರ್ಗಾವಣೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಿದ್ದಾರೆಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್  ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ  ನನ್ನ ಜಿಲ್ಲೆಗೆ ಸಂಬಂಧಪಟ್ಟಿದ್ದರೆ ಮಾಡುತ್ತೇನೆ ಹೊರತು ಬೇರೆಯದು ನನಗೆ ಸಂಬಂಧ ಇಲ್ಲ ಎಂದಿದ್ದಾರೆ.

ಹಾಸನ, ಜೂನ್ 14:  ನಾನು ಬೇರೆ ಇಲಾಖೆಯಲ್ಲಿ ಯಾಕೆ ಹಸ್ತಕ್ಷೇಪ ಮಾಡಲಿ? ಅಂತಹ ಪ್ರಮೇಯ ನನಗಿನ್ನು ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಜಲಸಂಪನ್ಮೂಲ‌  ಇಲಾಖೆ ವರ್ಗಾವಣೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಿದ್ದಾರೆಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್  ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ  ನನ್ನ ಜಿಲ್ಲೆಗೆ ಸಂಬಂಧಪಟ್ಟಿದ್ದರೆ ಮಾಡುತ್ತೇನೆ ಹೊರತು ಬೇರೆಯದು ನನಗೆ ಸಂಬಂಧ ಇಲ್ಲ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ನನ್ನ ಕಾರ್ಯವ್ಯಾಪ್ತಿ ಏನಿದೆ ಆ ಕೆಲಸ ಮಾಡಿಕೊಂಡು ಹೋಗುತ್ತೇನೆ. ವರ್ಗಾವಣೆ ವಿಚಾರ ಮುಖ್ಯಮಂತ್ರಿ ವ್ಯಾಪ್ತಿಗೆ ಸೇರುತ್ತದೆ. ಮುಖ್ಯಮಂತ್ರಿ ಬಳಿ ಮಾತನಾಡುವುದು ಡಿ.ಕೆ.ಶಿವಕುಮಾರ್ ಜವಾಬ್ದಾರಿ ಎಂದರು.

ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ.. ಏನು? ಏತ್ತ?

ಮಾಧ್ಯಮಗಳ ಮೇಲೆ ಮತ್ತೆ ರೇವಣ್ಣ ಗರಂ: ಸಚಿವ ಸಂಪುಟ ಹಂಚಿಕೆ ವೇಳೆ  ಎದ್ದ ಗೊಂದಲಗಳನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದ ರೇವಣ್ಣ ಇಂದು ಸಹ ಅದೇ ವರ್ತನೆ ಮುಂದುವರಿಸಿದರು.  ಕೆಲವು ಮಾಧ್ಯಮಗಳು ಬೇಕಂತಲೆ‌ ವಿವಾದ ಹುಟ್ಟು ಹಾಕುತ್ತವೆ.  ಮಾಧ್ಯಮಗಳಲ್ಲಿ ರೇವಣ್ಣ ದೇವೇಗೌಡರ ಎದುರು ಕಣ್ಣೀರು ಹಾಕಿದರು ಎಂದು ಸುದ್ದಿ ಮಾಡಲಾಗುತ್ತದೆ  ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡುತ್ತಾರೆ ಎಂದು ಮನಸ್ಸಿಗೆ ಬಂದ ಹಾಗೆ ತೋರಿಸುತ್ತಾರೆ. ನನ್ನ ಬದುಕಿನಲ್ಲಿ ಎಂದಿಗೂ ಕುಮಾರಸ್ವಾಮಿ ಜತೆ ಹೊಡೆದಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

click me!