ನೀರಿನ ನೋವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ವೀರೇಂದ್ರ ಹೆಗ್ಗಡೆ ಧನ್ಯವಾದ

By Web DeskFirst Published May 29, 2019, 7:11 PM IST
Highlights

ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿದ್ದು ಭಕ್ತಾದಿಗಳು ಕೆಲ ದಿನಗಳ ಕಾಲ ಪ್ರವಾಸ ಮುಂದಕ್ಕೆ ಹಾಕಿಕೊಳ್ಳಬೇಕು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸರಕಾರ ಮತ್ತು ಜನತೆಗೆ ಹೆಗ್ಗಡೆ ಧನ್ಯವಾದ ಸಲ್ಲಿಸಿದ್ದಾರೆ.

ಧರ್ಮಸ್ಥಳ[ಮೇ. 29]  ಸಿಎಂ ಕುಮಾರಸ್ವಾಮಿ ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ನೀರಿ ಅಭಾವಕ್ಕೆ ಸರ್ಕಾರ ಸ್ಪಂದಿಸದಕ್ಕೆ ಸಿಎಂ ಕುಮಾರಸ್ವಾಮಿಗೆ ಹೆಗ್ಗಡೆ ಕ್ರತಜ್ಞತೆ ಸಲ್ಲಿಸಿದ್ದಾರೆ.

ಮಂಜುನಾಥ್ ಸ್ವಾಮಿ ದೀರ್ಘಾಯುರಾರೋಗ್ಯ ಸಕಲ ಸನ್ಮಂಗಲವನ್ನುಂಟು ಮಾಡಲಿ ಹಾಗೂ ನಿಮ್ಮ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಹರಸಲೆಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು  ವೀರೇಂದ್ರ ಹೆಗ್ಗಡೆ ಹಾರೈಕೆ ತಿಳಿಸಿದ್ದಾರೆ.

ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ನೀರು

ನೇತ್ರಾವತಿ ನದಿ ಮತ್ತು ನೆರೆಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿ ಮಂಜೂರು ಮಾಡಿದ್ದು ಸಂತೋಷವಾಗಿದೆ. ಅಲ್ಲದೆ ರಾಜ್ಯದ ಜನರು ಸಹ ಧರ್ಮಸ್ಥಳದ ನೀರಿನ ಅಭಾವ ಅರಿತು ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿಕೊಂಡಿದ್ದಾರೆ.

 

click me!