ಮೆಟ್ಟೂರು ಡ್ಯಾಂಗೆ 2.30 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲು

By Web DeskFirst Published Aug 14, 2019, 11:21 AM IST
Highlights

ಕರ್ನಾಟಕದ ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ 12 ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ಮೆಟ್ಟೂರು ಜಲಾಶಯಕ್ಕೆ ಬರುವ ನೀರಿನಲ್ಲಿ ಭಾರೀ ಏರಿಕೆಯಾಗಿದೆ. 

ಚೆನ್ನೈ (ಆ. 14): ಕರ್ನಾಟಕದ ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ 12 ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ಮೆಟ್ಟೂರು ಜಲಾಶಯಕ್ಕೆ ಬರುವ ನೀರಿನಲ್ಲಿ ಭಾರೀ ಏರಿಕೆಯಾಗಿದೆ.

ದೇವರ ನಾಡಲ್ಲಿ ನಿಲ್ಲದ ಮಳೆ: 5 ಜಿಲ್ಲೆ​ಗ​ಳಲ್ಲಿ ಮತ್ತೆ ರೆಡ್‌ ಅಲ​ರ್ಟ್‌!

ಮಂಗಳವಾರ ಸಂಜೆ ವೇಳೆಗೆ ಜಲಾಶಯಕ್ಕೆ 2.30 ಲಕ್ಷ ಕ್ಯುಸೆಕ್‌ ನೀರಿನ ಒಳ ಹರಿವು ಇತ್ತು. 4 ದಿನಗಳ ಹಿಂದೆ ಅಣೆಕಟ್ಟಿನಲ್ಲಿ 57 ಅಡಿ ಸಂಗ್ರಹವಾಗಿತ್ತು, ಆದರೆ ಮಂಗಳವಾರ ಅದು 101 ಅಡಿಗೆ ಏರಿದೆ. ಈ ನಡುವೆ ಒಳ ಹರಿವಿನ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಮೆಟ್ಟೂರು ಅಣೆಕಟ್ಟಿನಿಂದ ರೈತರ ಜಮೀನುಗಳಿಗೆ ನೀರು ಹರಿಸಿದರು.

ರಾಜ್ಯದೆಲ್ಲೆಡೆ ಮಳೆ, ಪ್ರವಾಹ ಇಳಿಮುಖ

ಮೊದಲಿಗೆ 3000 ಕ್ಯೂಸೆಕ್‌ನಷ್ಟುನೀರನ್ನು ಡ್ಯಾಂನಿಂದ ಹೊರಬಿಡಲಾಯಿತು. ಸಂಜೆ ಹೊತ್ತಿಗೆ 10000 ಕ್ಯೂಸೆಕ್‌ ನೀರನ್ನು ರೈತರ ಜಮೀನುಗಳಿಗೆ ಪೂರೈಕೆ ಮಾಡಲಾಗಿದೆ. ಅಲ್ಲದೆ, ನೀರಾವರಿ ಪ್ರದೇಶಗಳಿಗೆ ಅಗತ್ಯವಿರುವಷ್ಟುನೀರನ್ನು ಮುಂದಿನ ದಿನಗಳಲ್ಲಿ ಬಿಡಲಾಗುತ್ತದೆ ಎಂದು ಸಿಎಂ ಪಳನಿಸ್ವಾಮಿ ಹೇಳಿದರು.

click me!