ದರೋಡೆಕೋರರು ಬಂದರೂ ಈತ ಹಾಯಾಗಿ ಸಿಗರೇಟ್‌ ಸೇದುತ್ತಿದ್ದ!

Published : Sep 06, 2019, 02:39 PM ISTUpdated : Sep 06, 2019, 02:51 PM IST
ದರೋಡೆಕೋರರು ಬಂದರೂ ಈತ  ಹಾಯಾಗಿ ಸಿಗರೇಟ್‌ ಸೇದುತ್ತಿದ್ದ!

ಸಾರಾಂಶ

ತಮಾಷೆಯಲ್ಲ... ದರೋಡೆಕೋರರು ಬಂದರೂ ಈತ  ಹಾಯಾಗಿ ಸಿಗರೇಟ್‌ ಸೇದುತ್ತಿದ್ದ!| ಈತನ ಸಹವಾಸವೇ ಬೇಡ ಎಂದು ಕಾಲ್ಕಿತ್ತ ಕಳ್ಳರು

ಸೇಂಟ್ ಲೂಯಿಸ್[ಸೆ.06]: ಅಮೆರಿಕದ ಸೇಂಟ್‌ ಲೂಯಿಸ್‌ನ ಬಾರ್‌ವೊಂದಕ್ಕೆ ನುಗ್ಗಿದ ದರೋಡೆಕೋರರು ಗನ್‌ ತೋರಿಸಿ ಬಾರ್‌ ಅನ್ನು ದೋಚಿದ್ದಾರೆ. ದರೋಡೆಕೋರರು ಬಂದಾಗ ಕೆಲವರು ಹೆದರಿ ತಮ್ಮ ಬಳಿ ಇದ್ದಬಿದ್ದ ವಸ್ತುಗಳನ್ನೆಲ್ಲಾ ಕಳ್ಳರಿಗೆ ನೀಡಿದ್ದಾರೆ. ಇನ್ನು ಕೆಲವರು ಕುರ್ಚಿ ಅಡಿಯಲ್ಲಿ ಅಡಗಿ ಕುಳಿತಿದ್ದರು.

ಆದರೆ, ಬಾರಿನಲ್ಲಿ ಕುಡಿಯುತ್ತಿದ್ದ ಟೋನಿ ಟೋವರ್‌ ಎಂಬಾತ ಏನೂ ಆಗಲೇ ಇಲ್ಲ ಎಂಬಂತೆ ತನ್ನ ಪಾಡಿಗೆ ತಾನು ಮೊಬೈಲ್‌ ಅನ್ನು ನೋಡುತ್ತಿದ್ದ. ದರೋಡೆಕೋರರು ಮೊಬೈಲ್‌ ನೀಡುವಂತೆ ಕೇಳಿದರೂ ಅತ್ತ ತಿರುಗಿಯೂ ನೋಡಿಲ್ಲ. ಬದಲಾಗಿ ಇನ್ನೊಂದು ಸಿಗರೇಟ್‌ ತರಿಸಿಕೊಂಡು ಸೇದಿದ್ದಾನೆ. ಈತನ ಸಹವಾಸವೇ ಬೇಡ ಎಂದು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸಿಸಿ ಟೀವಿಯಲ್ಲಿ ಈ ವಿಡಿಯೋ ಸೆರೆಯಾಗಿದ್ದು, ವೈರಲ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
ಕೊಡಗಿನಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ