ತಿರುಪತಿ ಲಡ್ಡುವಿನಲ್ಲಿ ನಟ್ಟು, ಬೋಲ್ಟು, ಪಾನ್-ಪರಾಗ್..?

Published : Nov 14, 2016, 03:15 PM ISTUpdated : Apr 11, 2018, 12:34 PM IST
ತಿರುಪತಿ ಲಡ್ಡುವಿನಲ್ಲಿ ನಟ್ಟು, ಬೋಲ್ಟು, ಪಾನ್-ಪರಾಗ್..?

ಸಾರಾಂಶ

ಲಡ್ಡು ತಯಾರಿಕೆಯಲ್ಲಿ  ಆಹಾರ ಸುರಕ್ಷತಾ ಕಾಯ್ದೆ -2006ರ ನಿಯಮಗಳನ್ನು ಪಾಲಿಸುತ್ತಿಲ್ಲ ಅಂತೇಳಿ ಕಳೆದ ಜೂನ್ ತಿಂಗಳಲ್ಲಿ  ದೆಹಲಿಯಲ್ಲಿರುವ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದದ್ರು. ಈ ದೂರಿನ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಆಂಧ್ರ ಸರ್ಕಾರ ತಿರುಪತಿ ತಿಮ್ಮಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಲಡ್ಡು ತಯಾರಿಕಾ ವಿಧಾನದಲ್ಲಿ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿತು. ಆದ್ರೆ ಖುದ್ದು ಆಂಧ್ರ ಸರ್ಕಾರದ ಸೂಚನೆಗೂ ತಿರುಪತಿ ಕಾರ್ಯನಿರ್ವಾಹಕ ಅಧಿಕಾರಿ ಇದುವರೆಗೂ ಉತ್ತರ ಕೊಟ್ಟಿಲ್ಲ. ಈಗ ದೂರುದಾರ ನರಸಿಂಹಮೂರ್ತಿ ತಿರುಪತಿ ತಿಮ್ಮಪ್ಪ ಆಡಳಿತಾಧಿಕಾರಿ ವಿರುದ್ಧ ಲೀಗಲ್ ನೊಟೀಸ್ ಕೊಟ್ಟು ಬಳಿಕ ಹೈಕೋರ್ಟ್​​ನಲ್ಲಿ ರಿಟ್ ಸಲ್ಲಿಸಲು ಮುಂದಾಗಿದ್ದಾರೆ.

ಬೆಂಗಳೂರು(ನ.14): ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಈ ಲಡ್ಡುವಿನ ಸ್ವಾದ, ಘಮಲು ಆಸ್ವಾದಿಸಿದವರಿಗೇ ಗೊತ್ತು. ಆದರೆ, 300 ವರ್ಷಗಳ ಇತಿಹಾಸ ಇರುವ ಈ ರುಚಿರುಚಿಯಾದ ಲಡ್ಡುವಿನಲ್ಲಿ ನಟ್ಟು, ಬೋಲ್ಟು, ಕೀ ಚೈನ್​`ಗಳು, ಪಾನ್​ ಪರಾಗ್`​ಗಳಂಥ ವಸ್ತುಗಳು ಸಿಗುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಇದೀಗ, ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದೆ. ಈ ಸಂಬಂಧ ಬೆಂಗಳೂರಿನ ವಕೀಲ ನರಸಿಂಹಮೂರ್ತಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ.

ಲಡ್ಡು ತಯಾರಿಕೆಯಲ್ಲಿ  ಆಹಾರ ಸುರಕ್ಷತಾ ಕಾಯ್ದೆ -2006ರ ನಿಯಮಗಳನ್ನು ಪಾಲಿಸುತ್ತಿಲ್ಲ ಅಂತೇಳಿ ಕಳೆದ ಜೂನ್ ತಿಂಗಳಲ್ಲಿ  ದೆಹಲಿಯಲ್ಲಿರುವ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದದ್ರು. ಈ ದೂರಿನ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಆಂಧ್ರ ಸರ್ಕಾರ ತಿರುಪತಿ ತಿಮ್ಮಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಲಡ್ಡು ತಯಾರಿಕಾ ವಿಧಾನದಲ್ಲಿ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿತು. ಆದ್ರೆ ಖುದ್ದು ಆಂಧ್ರ ಸರ್ಕಾರದ ಸೂಚನೆಗೂ ತಿರುಪತಿ ಕಾರ್ಯನಿರ್ವಾಹಕ ಅಧಿಕಾರಿ ಇದುವರೆಗೂ ಉತ್ತರ ಕೊಟ್ಟಿಲ್ಲ. ಈಗ ದೂರುದಾರ ನರಸಿಂಹಮೂರ್ತಿ ತಿರುಪತಿ ತಿಮ್ಮಪ್ಪ ಆಡಳಿತಾಧಿಕಾರಿ ವಿರುದ್ಧ ಲೀಗಲ್ ನೊಟೀಸ್ ಕೊಟ್ಟು ಬಳಿಕ ಹೈಕೋರ್ಟ್​​ನಲ್ಲಿ ರಿಟ್ ಸಲ್ಲಿಸಲು ಮುಂದಾಗಿದ್ದಾರೆ.

ಅಷ್ಟಕ್ಕೂ ತಿರಪುತಿ ಲಡ್ಡು ತಯಾರಿಕೆಯಲ್ಲಿ ಏನೆಲ್ಲ ನಿಯಮಗಳ ಉಲ್ಲಂಘನೆ ಆಗುತ್ತಿದೆ ಎಂದು ನೋಡುವುದಾದರೆ.

1. ತಿರುಪತಿ ಲಡ್ಡುವಿನಲ್ಲಿ ನಟ್​, ಬೋಲ್ಟ್, ಪಾನ್​ಪರಾಗ್ ಕವರ್, ಕೀಚೈನ್​ಗಳು ಸಿಗುತ್ತಿವೆ

2. ತಿರುಪತಿ ಲಡ್ಡು ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ

3. ಲಡ್ಡು ತಯಾರಕರು ಅರೆಮೈ ತೆರೆದು ಬೆವರಿನಲ್ಲೇ ಲಡ್ಡು ತಯಾರಿಸುತ್ತಾರೆ

4. ಲಡ್ಡು ತಯಾರಕರು ತಲೆಗೆ, ಕ್ಯಾಪ್, ಕೈಗವಸುಗಳು, ಏಪ್ರಾನ್ ಹಾಗೂ ಕಾಲಿಗೆ ಶೂಗಳನ್ನು ಧರಿಸುತ್ತಿಲ್ಲ.

5. ಪ್ರತೀ 15 ದಿನಕ್ಕೊಮ್ಮೆ ಲಡ್ಡು ತಯಾರಕರ ಆರೋಗ್ಯ ಪರಿಶೀಲನೆ ಆಗುತ್ತಿಲ್ಲ

6. ಲಡ್ಡುಗಳನ್ನು ನಿಷೇಧಿತ ಪ್ಲಾಸ್ಟಿಕ್​ ಕವರ್​ಗಳಲ್ಲೇ ವಿತರಿಸಲಾಗ್ತಿದೆ.

7.  ಲಡ್ಡು ಪೊಟ್ಟಣಗಳ ಮೇಲೆ ತಯಾರರಿಕೆ ಮತ್ತು ಅವಧಿ ಮುಗಿವ ದಿನಾಂಕಗಳಿರೋದಿಲ್ಲ.

8. ಲಡ್ಡು ಪೊಟ್ಟಣಗಳನ್ನು ಖರೀದಿಸಿದರೆ ಬಿಲ್ ಕೊಡುವುದಿಲ್ಲ

ಒಟ್ಟಿನಲ್ಲಿ, ತಿರುಪತಿ ಪ್ರಸಾದ ಲಡ್ಡು ಕೂಡಾ ಈಗ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುವ ಭೀತಿಗೆ ಒಳಗಾಗಿದೆ. ಕೋಟ್ಯಂತರ ಭಕ್ತರು ಭಕ್ತಿಯಿಂದ ಸ್ವೀಕರಿಸುವ ಪ್ರಸಾದ ತಿರುಪತಿ ಲಡ್ಡು. ಹಾಗಾಗಿ ತಿರುಪತಿ ಆಡಳಿತ ಮಂಡಳಿ ಇದರ ತಯಾರಿಕಾ ವಿಧಾನದಲ್ಲಿ ಸ್ವಚ್ಛತೆ ಮತ್ತುನಿಯಮಗಳನ್ನು ಅನುಸರಿಸಲೇಬೇಕಾಗಿದೆ..

ಕ್ಯಾಮೆರಮ್ಯಾನ್ ನವೀನ್ ಜೊತೆ ಮಸೂದ್ ದೊಡ್ಡೇಬಾಗಿಲು, ಸುವರ್ಣನ್ಯೂಸ್ ಮೆಟ್ರೋಬ್ಯೂರೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ