ಅಧಿಕಾರಿಗಳಿಗೆ ಮತದಾರರ ಗುರುತಿನ ಚೀಟಿ ಕಡ್ಡಾಯ

By Web DeskFirst Published Oct 23, 2018, 4:56 PM IST
Highlights

ರಜೆಯಲ್ಲಿರುವ ಸರ್ಕಾರಿ, ಅರೆ ಸರ್ಕಾರಿ ನೌಕರರು ಹಾಗೂ ತರಬೇತಿಗೆ ನಿಯೋಜನೆಗೊಂಡಿರುವ ಇತರೆ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಚುನಾವಣೆಗೆ ನಿಯೋಜಿಸಿರುವ ಆದೇಶವನ್ನು ಪಡೆದುಕೊಂಡು ತಾವು ಒಳಪಡುವ ವಿಧಾನ ಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿಯನ್ನು ತರಬೇತಿಗೆ ತಪ್ಪದೆ ತರಬೇಕು.

ಮಂಡ್ಯ(ಅ.23): ಮಂಡ್ಯ ಲೋಕಸಭಾ ಉಪಚುನಾವಣೆ ಸಂಬಂಧ ಮಂಗಳವಾರ ನಡೆಯಲಿರುವ ಚುನಾವಣಾ ತರಬೇತಿಗೆ ಬರುವ ಅಧಿಕಾರಿಗಳು ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.

ರಜೆಯಲ್ಲಿರುವ ಸರ್ಕಾರಿ, ಅರೆ ಸರ್ಕಾರಿ ನೌಕರರು ಹಾಗೂ ತರಬೇತಿಗೆ ನಿಯೋಜನೆಗೊಂಡಿರುವ ಇತರೆ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಚುನಾವಣೆಗೆ ನಿಯೋಜಿಸಿರುವ ಆದೇಶವನ್ನು ಪಡೆದುಕೊಂಡು ತಾವು ಒಳಪಡುವ ವಿಧಾನ ಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿಯನ್ನು ತರಬೇತಿಗೆ ತಪ್ಪದೆ ತರಬೇಕು.

ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಜನತಾ ಪ್ರಾತಿನಿಧ್ಯ ಅಧಿನಿಯಮ 1951ರ 134ನೇ ಪ್ರಕರಣದ ಮೇಲೆ ಕಾನೂನು ರೀತ್ಯಾ ಸೂಕ್ತ ಕ್ರಮ ವಹಿಸಲಾಗುವುದು ಎಂದು ಚುನಾವಣಾಧಿಕಾರಿ ಎನ್. ಮಂಜುಶ್ರೀ ತಿಳಿಸಿದ್ದಾರೆ.

click me!