ಮಾಜಿ ಬಿಗ್ ಬಾಸ್ ಸ್ಪರ್ಧಿ ಅರೆಸ್ಟ್

By Web DeskFirst Published Oct 23, 2018, 3:31 PM IST
Highlights

ನಿಷೇಧಿತ ನಶೆಯ ಮಾತ್ರೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್ ಬಾಸ್ ಸ್ಪರ್ಧಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಮುಂಬೈ :  ಮಾಜಿ ಬಿಗ್ ಬಾಸ್ ಹಾಗೂ ನಟನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಅಜಾಜ್ ಎಂಬುವವರನ್ನು ನಿಷೇಧಿತ ನಶೆಯ ಮಾತ್ರೆಗಳನ್ನು ಅಕ್ರಮವಾಗಿ ಹೊಂದಿದ್ದರಿಂದ ಬಂಧನಕ್ಕೊಳಪಡಿಸಲಾಗಿದೆ. 

ಮುಂಬೈನ ಬೆಲಾಪುರ್ ನಲ್ಲಿರುವ ಹೋಟೆಲ್ ರೂಮ್ನಲ್ಲಿ ಬಂಧಿಸಲಾಗಿದ್ದು ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಲಾಗಿದೆ. 

ಈ ಹಿಂದೆಯೂ ಒಮ್ಮೆ ಅಜಾಜ್ ಖಾನ್ ವಿರುದ್ಧ ಮಹಿಳೆಯೋರ್ವರು ಪ್ರಕರಣ ದಾಖಲು ಮಾಡಿದ್ದರು. ಅಸಹ್ಯವಾಗಿ ಸಂದೇಶ ಕಳಿಸಿದ್ದರೆಂದು ನೀಡಿದ ದೂರಿನ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. 

ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್ ಬಾಸ್ ಕಾರ್ಯಕ್ರಮದ 7ನೇ ಆವೃತ್ತಿಯಲ್ಲಿ  ಅಜಾಜ್ ಖಾನ್ ಪಾಲ್ಗೊಂಡಿದ್ದರು. ಅಲ್ಲದೇ ಕೆಲ ಬಾಲಿವುಡ್ ಚಿತ್ರಗಳಲ್ಲಿಯೂ ಕೂಡ ಅಜಾಜ್ ನಟನೆ ಮಾಡಿದ್ದಾರೆ. 

click me!