ನಿಮ್ಮ ಮತಗಟ್ಟೆ ತಿಳಿಯಬೇಕೆ?: ಆನ್‌ಲೈನ್‌ನಲ್ಲೇ ಸಿಗತ್ತೆ ಮಾಹಿತಿ!

By Web DeskFirst Published Mar 9, 2019, 5:56 PM IST
Highlights

ದೇಶದ ರಾಷ್ಟ್ರೀಯ ಹಬ್ಬ ಲೋಕಸಭೆ ಚುನಾವಣೆಗೆ ಕ್ಷಣಗಣನೆ| ನಿಮ್ಮ ಮತಗಟ್ಟೆ ಕುರಿತು ನಿಮಗೆ ಇರಬೇಕು ಮಾಹಿತಿ| ನಿಮ್ಮ ಮತಗಟ್ಟೆ ಬಿಟ್ಟು ಬೇರೆ ಮತಗಟ್ಟೆಯಲ್ಲಿ ಮತ ಹಾಕುವಂತಿಲ್ಲ| ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಿಗಲಿದೆ ನಿಮ್ಮ ಮತಗಟ್ಟೆಯ ಮಾಹಿತಿ| ಸುಲಭ ವಿಧಾನದ ಮೂಲಕ ಪಡೆದುಕೊಳ್ಳಿ ಮತಗಟ್ಟೆ ಮಾಹಿತಿ|

ಬೆಂಗಳೂರು(ಮಾ.09): ಸಾರ್ವತ್ರಿಕ ಚುನಾವಣೆಯನ್ನು ಭಾರತದ ರಾಷ್ಟ್ರೀಯ ಹಬ್ಬ ಎಂತಲೇ ಕರೆಯುತ್ತಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಜಾತಿ, ಲಿಂಗ, ಧರ್ಮದ ಹಂಗಿಲ್ಲದೇ ಒಟ್ಟಾಗಿ ಭಾಗವಹಿಸುವ ಲೋಕಸಭೆ ಚುನಾವಣೆ ಎಂಬ ರಾಷ್ಟ್ರೀಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಲಿದೆ. 

ಇನ್ನು ಯುವಪೀಳಿಗೆಯ ಒಂದು ದೊಡ್ಡ ಪಡೆಯನ್ನೇ ಹೊಂದಿರುವ ಭಾರತದಲ್ಲಿ, ಇದೇ ಮೊದಲ ಬಾರಿಗೆ ಮತದಾನ ಮಾಡಲು ಕೋಟ್ಯಂತರ ಯುವಕ, ಯುವತಿಯರು ಕುತೂಹಲದಿಂದ ಕಾಯುತ್ತಿದ್ದಾರೆ. 

ಆದರೆ ಬಹುತೇಕರಿಗೆ ತಮ್ಮ ಹತ್ತಿರದ ಮತಗಟ್ಟೆ ಕುರಿತು ಮಾಹಿತಿ ಇರುವುದಿಲ್ಲ. ತಾವು ಯಾವ ಮತಗಟ್ಟೆಯಲ್ಲಿ ಮತ ಹಾಕಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.

ಅದರಂತೆ ಭಾರತದ ಚುನಾವಣಾ ಆಯೋಗ ಪ್ರತಿಯೊಬ್ಬ ಮತದಾರನಿಗೆ ತನ್ನ ಮತಗಟ್ಟೆ ಕುರಿತು ಮಾಹಿತಿ ನೀಡುತ್ತದೆ. ಈ ಮಾಹಿತಿ ಇದೀಗ ಆನ್‌ಲೈನ್‌ನಲ್ಲೂ ಲಭ್ಯವಿದ್ದು, ಕೇಂದ್ರ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತಗಟ್ಟೆಯ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ಮತಗಟ್ಟೆ ಮಾಹಿತಿ ಪಡೆಯುವುದು ಹೇಗೆ?:
1. ಕೇಂದ್ರ  ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
2. ನ್ಯಾಶನಲ್ ವೋಟರ್ಸ್ ಸರ್ವೀಸ್ ಪೋರ್ಟಲ್‌ಗೆ ಭೇಟಿ ನೀಡಬೇಕು.
3. ಅಲ್ಲಿ ಎಲೆಕ್ಟ್ರೋರಲ್ ಸರ್ಚ್ ವಿಭಾಗ ಕ್ಲಿಕ್ ಮಾಡಬೇಕು.
4. ಈ ವಿಭಾಗದಲ್ಲಿ ನೀವು ಕೆಲವೊಂದು ಪ್ರಾಥಮಿಕ ಮಾಹಿತಿಗಳನ್ನು ತುಂಬಬೇಕಾಗುತ್ತದೆ.
5. ನಿಮ್ಮ ಹೆಸರು, ಜನ್ಮ ದಿನಾಂಕ, ತಂದೆ/ಪತಿಯ ಹೆಸರು, ಲಿಂಗ, ರಾಜ್ಯ, ವಿಧಾನಸಭೆ ಕ್ಷೇತ್ರಗಳ ಕುರಿತು ಮಾಹಿತಿ ನೀಡಬೇಕು. 
6. ರಾಜ್ಯ ಮತ್ತು ವಿಧಾನಸಭೆ ಮಾಹಿತಿಯನ್ನು ಇಲ್ಲಿ ನೀಡಲಾದ ಮ್ಯಾಪ್ ಮೂಲಕವೂ ಗುರುತಿಸಬಹುದಾಗಿದೆ.
7. ನಂತರ ವೆಬ್‌ಸೈಟ್‌ನಲ್ಲಿ ನೀಡಲಾದ ಕೋಡ್‌ನ್ನು ನಮೂದಿಸುವ ಮೂಲಕ ನಿಮ್ಮ ಮತಗಟ್ಟೆಯ ಕುರಿತು ಮಾಹಿತಿ ಪಡೆಯಬಹುದಾಗಿದೆ.

click me!