ಕೊಹ್ಲಿ ಟ್ವೀಟ್'ಗೆ 'ಗೋಲ್ಡನ್ ಟ್ವೀಟ್ ಆಫ್ 2016' ಅವಾರ್ಡ್

Published : Dec 07, 2016, 09:27 PM ISTUpdated : Apr 11, 2018, 12:48 PM IST
ಕೊಹ್ಲಿ ಟ್ವೀಟ್'ಗೆ 'ಗೋಲ್ಡನ್ ಟ್ವೀಟ್ ಆಫ್ 2016' ಅವಾರ್ಡ್

ಸಾರಾಂಶ

ಅನುಷ್ಕಾ ಶರ್ಮಾಗೆ ಸಂಬಂಧಿಸಿದ ಕೊಹ್ಲಿ ಮಾಡಿದ ಟ್ವೀಟ್ ಒಂದು ಕೆಲ ಸಮಯದ ಹಿಂದೆ ಭಾರೀ ಸದ್ದು ಮಾಡಿತ್ತು. ಇದು ವಿರಾಟ್ ಕೊಹ್ಲಿಯಲ್ಲಿದ್ದ ಉತ್ತಮ ಗುಣವನ್ನು ಎಲ್ಲರಿಗೂ ಪರಿಚಯಿಸಿತ್ತು. ಸದ್ಯ ವಿರಾಟ್ ಕೊಹ್ಲಿಯ ಈ ಟ್ವೀಟ್'ನ್ನು ಟ್ವಿಟರ್ ಪ್ರಸಕ್ತ ವರ್ಷದ(2016) ಬೆಸ್ಟ್ ಟ್ವೀಟ್ ಎಂದು ಪರಿಗಣಿಸಿ 'ಗೋಲ್ಡನ್ ಟ್ವೀಟ್ ಆಫ್ 2016' ಎಂದು ಘೋಷಿಸಿದೆ.

ನವದೆಹಲಿ(ಡಿ.08): ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೇವಲ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲಾತಾಣಗಳಲ್ಲೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೋದಿಯ ಸ್ವಚ್ಛ ಬಾರತ ಯೋಜನೆ, ನೋಟ್ ಬ್ಯಾನ್ ವಿಚಾರ ಮಾತ್ರವಲ್ಲದೆ ಅನುಷ್ಕಾ ಶರ್ಮಾ ಕುರಿತಾದ ಪ್ರತಿಕ್ರಿಯೆ ನೀಡಲು ಕೊಹ್ಲಿ ಯಾವತ್ತೂ ಹಿಂದೇಟು ಹಾಕಿಲ್ಲ. ತನ್ನ ಕಾಲೆಳೆದವರಿಗೆ ತಕ್ಕ ಉತ್ತರ ನೀಡಲು ಕೊಹ್ಲಿ ಯಾವತ್ತೂ ರೆಡಿ.

ಅನುಷ್ಕಾ ಶರ್ಮಾಗೆ ಸಂಬಂಧಿಸಿದಂತೆ ಕೊಹ್ಲಿ ಮಾಡಿದ ಟ್ವೀಟ್ ಕೆಲ ಸಮಯದ ಹಿಂದೆ ಭಾರೀ ಸದ್ದು ಮಾಡಿತ್ತು. ಇದು ವಿರಾಟ್ ಕೊಹ್ಲಿಯಲ್ಲಿದ್ದ ಉತ್ತಮ ಗುಣವನ್ನು ಎಲ್ಲರಿಗೂ ಪರಿಚಯಿಸಿತ್ತು. ಸದ್ಯ ವಿರಾಟ್ ಕೊಹ್ಲಿಯ ಈ ಟ್ವೀಟ್'ನ್ನು ಟ್ವಿಟರ್ ಪ್ರಸಕ್ತ ವರ್ಷದ(2016) ಬೆಸ್ಟ್ ಟ್ವೀಟ್ ಎಂದು ಪರಿಗಣಿಸಿ 'ಗೋಲ್ಡನ್ ಟ್ವೀಟ್ ಆಫ್ 2016' ಎಂದು ಘೋಷಿಸಿದೆ.

ಸಾಮಾಜಿಕ ಜಾಲಾತಾಣಗಳಲ್ಲೊಂದಾದ ಟ್ವಿಟರ್ ಪ್ರಸಕ್ತ ವರ್ಷದ ಅತ್ಯಂತ ಪ್ರಭಾವಿ ಟ್ವೀಟ್'ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಪ್ರಧಾನಿ ಮೋದಿಯ ನೋಟ್ ಬ್ಯಾನ್ ಕುರಿತಾದ ಟ್ವೀಟ್ ಕೂಡಾ ಸ್ಥಾನ ಪಡೆದುಕೊಂಡಿದೆ. ಆದರೂ ವಿರಾಟ್ ಕೊಹ್ಲಿಯ ಟ್ವೀಟ್ ಅಗ್ರ ಸ್ಥಾನದಲ್ಲಿದೆ. ಮಹಿಳೆಯರ ಸುರಕ್ಷತೆ ಹಾಗೂ ಅವರ ಕಾಪಾಡುವ ದೃಷ್ಟಿಯಲ್ಲಿ ವಿರಾಟ್ ಕೊಹ್ಲಿಯ ಟ್ವೀಟ್ ಒಂದು ಪ್ರಬಲ ಧ್ವನಿ ಎಂದು ಟ್ವಿಟರ್ ಪರಿಗಣಿಸಿದೆ.

ಕೊಹ್ಲಿಯ ಆ ಟ್ವೀಟ್ ಯಾವುದು?

ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾಳೇ ಕಾರಣ ಎಂಬ ಸುದ್ಧಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅನುಷ್ಕಾ ಶರ್ಮಾ ಹೊಣೆ ಎಂದು ಬಣ್ಣಿಸಿದವರೆಲ್ಲರಿಗೂ 2016ರ ಮಾರ್ಚ್'ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದರು.

'ನಿರಂತರವಾಗಿ ಅನುಷ್ಕಾ ಶರ್ಮಾಳನ್ನು ದೂಷಿಸುವವರಿಗೆ ನಾಚಿಕೆಯಾಗಬೇಕು. ಕೊಂಚ ಕರುಣೆ ಇರಲಿ. ಆಕೆ(ಅನುಷ್ಕಾ) ಯಾವತ್ತೂ ನನಗೆ ಪ್ರೇರಣೆ ನೀಡಿದ್ದಾಳೆ'

ಅಲ್ಲದೆ ಇನ್ಸ್ಟಾಗ್ರಾಂನಲ್ಲೂ 'ನನ್ನೆಲ್ಲಾ ತಪ್ಪುಗಳಿಗೆ ಅನುಷ್ಕಾ ಶರ್ಮಾಳನ್ನು ದೂಷಿಸುವವರೆಲ್ಲರಿಗೂ ನಾಚಿಕೆಯಾಗಬೇಕು. ತಮ್ಮನ್ನು ತಾವು ಅಕ್ಷರಸ್ಥರು ಎನ್ನಲು ನಾಚಿಕೆಯಾಗಬೇಕು. ಪಂದ್ಯದಲ್ಲಿ ನಾನು ನೀಡಿದ ಕಳಪೆ ಪ್ರದರ್ಶನ ಹಾಗೂ ಅನುಷ್ಕಾಳಿಗೆ ಯಾವುದೇ ಸಂಬಂಧವಿಲ್ಲ. ಆಕೆಯನ್ನು ದೂಷಿಸುವವರಿಗೆ ನಾಚಿಕೆಯಾಗಬೇಕು. ಆಕೆ ನನಗೆ ಯಾವತ್ತೂ ಪ್ರೇರಣೆಯಾಗಿದ್ದಾಳೆ. ಈ ಮಾತು ನಾಣು ಈ ಮೊದಲೇ ಹೇಳಬೇಕೆಂದಿದ್ದೆ. ಈ ಪೋಸ್ಟ್'ಗಾಗಿ ನನಗೆ ಯಾವುದೇ ಅವಾರ್ಡ್ ಬೇಡ, ಬದಲಾಗಿ ಅನುಷ್ಕಾ ಮೇಲೆ ಸ್ವಲ್ಪ ಕರುಣೆ ತೋರಿಸಿ ಆಕೆಗೆ ಗೌರವ ನೀಡಿ. ನಿಮ್ಮ ತಂಗಿ, ತಾಯಿಯ ಕುರಿತಾಗಿ ಸ್ವಲ್ಪ ಯೋಚಿಸಿ ಅವರಿಗೆ ಇಂತಹ ಪರಿಸ್ಥಿತಿ ಎದುರಾಗಿದ್ದರೆ ಯಾವ ರೀತಿ ಅನುಭವವಾಗುತ್ತಿತ್ತು ಎಂಬುವುದನ್ನು ಯೋಚಿಸಿ. ಯಾರಾದರೂ ಅವರನ್ನು ಸಾರ್ವಜನಿಕವಾಗಿ ಹಿಯಾಳಿಸಿದರೆ ಅವರ ಭಾವನೆ ಹೇಗಿರುತ್ತಿತ್ತು ಎಂದು ಯೋಚಿಸಿ'  ಎನ್ನುವ ಮೂಲಕ ವಿರಾಟ್ ಕೊಹ್ಲಿ ಎಲ್ಲರಿಗೂ ತಕ್ಕ ಉತ್ತರ ನೀಡಿ ತಲೆ ತಗ್ಗಿಸುವಂತೆ ಮಾಡಿದ್ದರು.

ಮಾಧ್ಯಮಗಳಲ್ಲಿ ಈ ರೀತಿ ಸುದ್ದಿ ಪ್ರಸಾರವಾಗಲು ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ನಡುವಿನ ಬ್ರೇಕ್ ಅಪ್ ಕಾರಣವಾಗಿತ್ತು. ಸದ್ಯ ತಮ್ಮ ನಡುವಿನ ಮನಸ್ತಾಪಗಳನ್ನು ಬಗೆಹರಿಸಿಕೊಂಡಿರುವ ಇವರು ಕೆಲ ದಿನಗಳ ಹಿಂದಷ್ಟೇ ಯುವರಾಜ್ ಸಿಂಗ್ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಟ್ವಿಟರ್ ಹೇಳುವ ಪ್ರಕಾರ ಮಹಿಳೆಯರ ಸುರಕ್ಷತೆ ಹಾಗೂ ಅವರನ್ನು ಕಾಪಾಡುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ತಮ್ಮ ಧ್ವನಿ ಎತ್ತಿದ್ದರು ಎಂದಿದೆ. ಇದೊಂದು ಅತ್ಯದ್ಭುತ ಟ್ವೀಟ್ ಆಗಿರುವುದರಿಂದ ಇದಕ್ಕೆ 'ಗೋಲ್ಡನ್ ಟ್ವೀಟ್ ಆಫ್ ದ ಇಯರ್' ಅವಾರ್ಡ್ ಲಭಿಸಿದೆ. ಕೊಹ್ಲಿಯ ಈ ಒಂದು ಟ್ವೀಟ್'ನ್ನು ಸರಿ ಸುಮಾರು 40,000 ಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಲ್ಲದೆ, 12,000 ಮಂದಿ ಪ್ರತಿಕ್ರಿಯಿಸಿದ್ದರು. ಇಷ್ಟೇ ಅಲ್ಲದೆ 1 ಲಕ್ಷಕ್ಕೂ ಅಧಿಕ ಮಂದಿ 'ಫೇವರಿಟ್' ಎಂದು ಆಯ್ಕೆ ಮಾಡಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ