
ಮುಂಬೈ(ಡಿ.26): ಇತ್ತೀಚೆಗಷ್ಟೇ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ
ಜೋಡಿ, ಇಂದು ಮುಂಬೈನಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ವಲಯದ ಸ್ನೇಹಿತರಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ.
ವಿರುಷ್ಕಾ ಜೋಡಿ ಸಂಬಂಧಿಕರು, ಕುಟುಂಬದ ಆಪ್ತರು ಹಾಗೂ ಸ್ನೇಹಿತರಿಗೆ ಡಿ.21ರಂದು ನವದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಇದೀಗ ಬಾಲಿವುಡ್'ನಲ್ಲಿನ ಆಪ್ತರು ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಇತರೆ ಸ್ನೇಹಿತರಿಗಾಗಿ ಮುಂಬೈನ ಸೇಂಟ್ ರೆಗಿಸ್ ಹೋಟೆಲ್'ನಲ್ಲಿ ಔತಣಕೂಟ ಆಯೋಜಿಸಲಾಗಿದೆ. ಸುಮಾರು 300 ಅತಿಥಿಗಳಿಗೆ ಆಸನ ಸಾಮರ್ಥ್ಯವಿರುವ ಆರತಕ್ಷತೆ ಹಾಲ್'ನಲ್ಲಿ ಸಂಜೆ 8.30ರಿಂದ ಆರತಕ್ಷತೆ ಆರಂಭವಾಗಲಿದೆ.
ನಿರ್ದೇಶಕ ಕುನಾಲ್ ಕೊಹ್ಲಿ ತಾರಾ ದಂಪತಿ ಕಳಿಸಿದ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಟ್ವಿಟ್ಟರ್'ನಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.