ಖಾಲಿ ರೈಲಿನೆಡೆಗೆ ಕೈಬೀಸಿ ಕ್ಯಾಮೆರಾಗೆ ಪೋಸ್‌ ಕೊಟ್ಟ ಮೋದಿ?

Published : Dec 28, 2018, 07:59 AM ISTUpdated : Dec 28, 2018, 08:02 AM IST
ಖಾಲಿ ರೈಲಿನೆಡೆಗೆ ಕೈಬೀಸಿ ಕ್ಯಾಮೆರಾಗೆ ಪೋಸ್‌ ಕೊಟ್ಟ ಮೋದಿ?

ಸಾರಾಂಶ

ಬೋಗಿಬೀಲ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆ ಬಳಿಕ ನರೇಂದ್ರ ಮೋದಿ ಜನರೇ ಇರದ ರೈಲಿನೆಡೆಗೆ ಕೈ ಮಾಡುತ್ತಾ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಇತ್ತೀಚೆಗೆ ಅಸ್ಸಾಂನಲ್ಲಿ ನಿರ್ಮಿಸಲಾದ ಭಾರತದ ಅತಿ ಉದ್ದನೆಯ ರೈಲು-ರಸ್ತೆ ಸೇತುವೆ ಎಂಬ ಖ್ಯಾತಿಯ ಬೋಗಿಬೀಲ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆ ಬಳಿಕ ನರೇಂದ್ರ ಮೋದಿ ಜನರೇ ಇರದ ರೈಲಿನೆಡೆಗೆ ಕೈ ಮಾಡುತ್ತಾ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೊದಲಿಗೆ ‘ಫೇಕು ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ನೂತನವಾಗಿ ನಿರ್ಮಾಣವಾದ ಸೇತುವೆ ಮೇಲೆ ನಿಂತು ನರೇಂದ್ರ ಮೋದಿ ಜನರೆಡೆಗೆ ಕೈಮಾಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ ಕ್ಯಾಮೆರಾಗೇ ಪೋಸ್‌ ಕೊಡಲು ನರೇಂದ್ರ ಮೋದಿ ಖಾಲಿ ರೈಲಿನೆಡೆಗೆ ಕೈಮಾಡುತ್ತಿದ್ದಾರೆ ಎಂದು ಬರೆದು ಒಕ್ಕಣೆ ಬರೆದಿತ್ತು. ಅನಂತರದಲ್ಲಿ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಖಾಲಿ ರೈಲಿನೆಡೆಗೆ ಕೈಬೀಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ದೃಢವಾಗಿದೆ.

ಏಕೆಂದರೆ ಸೇತುವೆ ಉದ್ಘಾಟನೆಯ ನೇರಪ್ರಸಾರದ ವಿಡಿಯೋಗಳನ್ನು ಗಮನಿಸಿದಾಗ ರೈಲಿನ ತುಂಬಾ ಜನರಿರುವುದು ತಿಳಿಯುತ್ತದೆ. 9:12 ನಿಮಿಷ ಇರುವ ಮೂಲ ವಿಡಿಯೋದಲ್ಲಿ ರೈಲು ಜನರಿಂದ ಭರ್ತಿಯಾಗಿರುವುದು ಕಾಣುತ್ತದೆ. ಜೊತೆಗೆ ‘ಪಿಐಬಿ ಇಂಡಿಯಾ’ ಮೋದಿ ಹಸಿರು ನಿಶಾನೆ ತೋರಿ ಉದ್ಘಾಟನೆ ಮಾಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ರೈಲಿನಲ್ಲಿ ಜನರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು