'ಅಭಿ' ನಾ ಜಾವೋ ಚೋಡಕರ್: ಕುಣಿಯುತ್ತಲೇ ಶತ್ರು ನೆಲ ಒದ್ದ ಧೀರ?

Published : Mar 02, 2019, 01:52 PM IST
'ಅಭಿ' ನಾ ಜಾವೋ ಚೋಡಕರ್: ಕುಣಿಯುತ್ತಲೇ ಶತ್ರು ನೆಲ ಒದ್ದ ಧೀರ?

ಸಾರಾಂಶ

ತಾಯ್ನಾಡಿಗೆ ಮರಳಿದ ಭಾರತಾಂಬೆಯ ಹೆಮ್ಮೆಯ ಪುತ್ರ| ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಗೊಂಡ ವಿಂಗ್ ಕಮಾಂಡರ್ ಅಭಿನಂದನ್| ಸುಳ್ಳು ವಿಡಿಯೋ ಹರಿಬಿಡುವ ಮೂಲಕ ನರಿಬುದ್ದಿ ತೋರಿಸುತ್ತಿದೆ ಪಾಕಿಸ್ತಾನ| ಅಭಿನಂದನ್ ಪಾಕ್ ಸೈನಿಕರೊಂದಿಗೆ ಡ್ಯಾನ್ಸ್ ಮಾಡುವ ವಿಡಿಯೋ| ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಲಾಗಿ ಹೊರ ಬಂದ ಸತ್ಯ ಏನು?

ನವದೆಹಲಿ(ಮಾ.02): 'ಇಲಾಖಾ ಕುತ್ತೋ ಕಾ ಹೋತಾ ಹೈ, ಶೇರೊ ಕಾ ನಹೀ..'ಎಂಬ ಫೇಮಸ್ ಹಿಂದಿ ಡೈಲಾಗ್ ಕೇಳಿದ್ದೀರಲ್ಲವೇ?. ಅದ್ಯಾವ ಪುಣ್ಯಾತ್ಮ ಈ ಡೈಲಾಗ್ ಬರೆದನೋ ಗೊತ್ತಿಲ್ಲ, ಆದರೆ ಇದನ್ನು ಬರೆಯೋ ಮುನ್ನ ವಿಂಗ್ ಕಮಾಂಡರ್ ಅಭಿನಂದನ್ ಎಂಬ ಧೀರನೇ ಖಂಡಿತ ಆತನ ಸ್ಮೃತಿಪಟಲದಲ್ಲಿರಬೇಕು.

ಶತ್ರುಗಳ ನೆಲದಲ್ಲಿದ್ದರೂ ತಮ್ಮ ಕರ್ತವ್ಯ, ತಮ್ಮ ಸ್ವಾಭಿಮಾನ ಬಿಟ್ಟು ಕೊಡದ ವಿಂಗ್ ಕಮಾಂಡರ್ ಅಭಿನಂದನ್, ತಮ್ಮ ಶೂರತ್ವದಿಂದಲೇ ಶತ್ರುಗಳ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಅಭಿನಂದನ್ ಪಾಕ್ ವಶದಲ್ಲಿದ್ದಾಗಲೂ ಸೈನಿಕನೋರ್ವನ ಘನತೆಯನ್ನು ಕಾಪಾಡಿದ್ದಾರೆ. ಇದೇ ಕಾರಣಕ್ಕೆ ಪಾಕ್ ಸೇನೆ ಕೂಡ ಅವರೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸುವ ಅನಿವಾರ್ಯತೆಗೆ ಬಂದು ತಲುಪಿತ್ತು. ಬಹುಶಃ ಅವರಿಗೆ ಅಭಿನಂದನ್ ಅದೆಷ್ಟು ಇಷ್ಟವಾಗಿದ್ದರೆಂದರೆ ಅವರು ಹೊರಡುವಾಗ 'ಅಭಿ ನಾ ಜಾವೋ ಚೋಡಕರ್, ಕೆ ದಿಲ್ ಅಭಿ ಭರಾ ನಹೀ..' ಅಂತಾ ಅಂಗಲಾಚಿರಬೇಕು.

ಸದ್ಯ ಅಭಿನಂದನ್ ಭಾರತಕ್ಕೆ ಬಂದಾಗಿದೆ. ಆದರೆ ಅವರು ಪಾಕಿಸ್ತಾನ ವಶದಲ್ಲಿದ್ದಾಗ ಬಲವಂತವಾಗಿ ಕೆಲವು ವಿಡಿಯೋಗಳನ್ನು ಮಾಡಿಸಿಕೊಂಡಿದ್ದು, ಪ್ರಮುಖವಾಗಿ ಪಾಕ್ ಸೈನ್ಯದ ಕುರಿತು ಅಭಿನಂದನ್ ಮಾತುಳು ಮತ್ತು ಭಾರತದ ಮಾಧ್ಯಮಗಳ ಕುರಿತಾದ ಅಸಮಾಧಾನದ ವಿಡಿಯೋ ವೈರಲ್ ಆಗಿವೆ. ಆದರೆ ಈ ವಿಡಿಯೋಗಳನ್ನು ಪಾಕ್‌ನ ಐಎಸ್‌ಐ ಬಲವಂತವಾಗಿ ಮಾಡಿಸಿಕೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.

ಅದರಂತೆ ಅಭಿನಂದನ್ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಪಾಕ್ ಸೈನಿಕರು ಮತ್ತು ವಾಯುಸೇನಾ ಅಧಿಕಾರಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.

"

ಆದರೆ ಈ ವಿಡಿಯೋದಲ್ಲಿರುವವರು ವಿಂಗ್ ಕಮಾಂಡರ್ ಅಭಿನಂದನ್ ಅಲ್ಲ ಎಂಬುದು ಇದೀಗ ಸಾಬೀತಾಗಿದೆ. ಇದು ಕೆಲ ವರ್ಷಗಳ ಹಿಂದಿನ ವಿಡಿಯೋವಾಗಿದ್ದು, ಶಾಂತಿ ಸಮಯದಲ್ಲಿ ಭಾರತ-ಪಾಕ್ ಸೈನಿಕರು ಒಟ್ಟಾಗಿ ಜನಪ್ರಿಯ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ ವಿಡಿಯೋ ಇದಾಗಿದೆ.

ಆದರೆ ಪಾಕಿಸ್ತಾನ ಈ ವಿಡಿಯೋವನ್ನು ಬಿಡುಗಡೆ ಮಾಡಿ ಅಭಿನಂದನ್ ಪಾಕ್ ಸೈನಿಕರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂಬರ್ಥದಲ್ಲಿ ಬಿಂಬಿಸಿದೆ. ಒಂದು ವೇಳೆ ಪಾಕಿಸ್ತಾನದ ವಾದ ಸರಿ ಎಂದೇ ಭಾವಿಸಿದರೂ, ಕುಣಿತದ ನೆಪದಲ್ಲಿ ಶತ್ರುಗಳ ಸಮ್ಮುಖದಲ್ಲೇ ಅವರ ನೆಲ ಒದ್ದು ಬಂದ ವಿಂಗ್ ಕಮಾಂಡರ್ ಅಭಿನಂದನ್ ಗೆ ಶತಕೋಟಿ ಭಾರತೀಯರ ಸಲಾಂ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ