'ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೋದಿಯವರೇ ಬಂದು ಸ್ಪರ್ಧಿಸಲಿ'

By Web DeskFirst Published Mar 2, 2019, 1:37 PM IST
Highlights

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾಂಗ್ರೆಸ್ ಅತೃಪ್ತ ಶಾಸಕ ಸ್ಪರ್ಧಿಸುವ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು ಹೀಗೆ.

ಮಂಡ್ಯ, [ಮಾ.02]: ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರ ರಂಗೇರಲಿದೆ. ರಾಷ್ಟ್ರಮ್ಟದಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿಲು ಬಿಜೆಪಿ ಹಲವು ಕಾರ್ಯ ತಂತ್ರಗಳನ್ನು ಹೆಣೆದಿದೆ. 

ಕಾಂಗ್ರೆಸ್ ನ ಅತೃಪ್ತ ಶಾಸಕ,ಬಂಜಾರ ಸಮುದಾಯದ ಪ್ರಮುಖ ಲೀಡರ್ ಆಗಿರುವ ಉಮೇಶ್ ಜಾಧವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಖಾಡಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ.

ಸೆಡ್ಡು ಹೊಡೆದ ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ ಅನುಭವದ ಆಟ

ಆದ್ರೆ, ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರವನ್ನು ರೂಪಿಸಿದ್ದು, ಯಾರೇ ಬಂದರೂ ಮಲ್ಲಿಕಾರ್ಜನ ಖರ್ಗೆ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಅಭಿಮಾನಿಗಳ ಮಾತು. 

ಇನ್ನು ಈ ಬಗ್ಗೆ ಮದ್ದೂರಿನಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, 'ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾಧವ್ ಬದಲಿಗೆ ಮೋದಿಯವರೇ ಬಂದು ನಿಲ್ಲಲಿ. ಅವರಿಗೂ ಸ್ವಾಗತ ಮಾಡುತ್ತೇವೆ' ಎಂದರು. 

ಅತೃಪ್ತ ಶಾಸಕ ಕಾಂಗ್ರೆಸ್‌ ತೊರೆಯುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

 ಇದು ಪ್ರಜಾಪ್ರಭುತ್ವ ಯಾರೂ ಬೇಕಾದರು ಸ್ಪರ್ಧೆ ಮಾಡಬಹುದು. ನೀವು ಬೇಕಾದರೂ ಸ್ಪರ್ಧೆ ಮಾಡಬಹುದು ಮಾಧ್ಯಮದವರಿಗೆ ಹಾಸ್ಯ ಚಟಾಕೆ ಹಾರಿಸಿದರು.

ಇನ್ನು ಇದೇ ವೇಳೆ ಸುಲಮತಾ ಅಂಬರೀಶ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಹೈ ಕಮಾಂಡ್‌ಗೆ ಬಿಟ್ಟ ವಿಚಾರ. ಟಿಕೆಟ್ ನಿರ್ಧರಿಸುವ ಮಟ್ಟಕ್ಕೆ ನಾನು ಬೆಳೆದಿಲ್ಲ. ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್ ಸಂಸದರಿದ್ದಾರೆ. ದಿನೇಶ್ ಗುಂಡೂರಾವ್, ದೇವೇಗೌಡ, ಸಿದ್ದರಾಮಯ್ಯ ಚರ್ಚೆ ಮಾಡಿ ಟಿಕೆಟ್ ಕೊಡ್ತಾರೆ ಎಂದು ಹೇಳಿದರು.

click me!