
ಮಂಡ್ಯ, [ಮಾ.02]: ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸೋದು ಖಚಿತ ಎಂದು ಹೇಳಲಾಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಈಗಾಗಲೇ ಕಾಂಗ್ರೆಸ್ ನಿರ್ಧರಿಸಿದೆ.ಇದ್ರಿಂದ ಸುಮಲತಾಗೆ ಕಾಂಗ್ರೆಸ್ ಟಿಕೇಟ್ ತಪ್ಪಿದೆ. ಹೀಗಾಗಿ ಸುಮಲತಾ ಪಕ್ಷೇತರರಾಗಿಯೇ ಸ್ಫರ್ಧಿಸಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.
ಸುಮಲತಾ ಅಂಬರೀಶ್‌ಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರ ಆಫರ್ ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ಟಿಕೇಟ್ ಸಿಗಲ್ಲ ಅಂತ ಗೊತ್ತಿದ್ರೂ ಸಹ ಸುಮಲತಾ ಅಂಬರೀಶ್, ಪ್ರಮುಖರ ಅಭಿಪ್ರಾಯ ಸಂಗ್ರಹಿಸಲು ಮಂಡ್ಯದಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಇದ್ರಿಂದ ಜೆಡಿಎಸ್ಗೆ ಮಗ್ಗಲು ಮುಳ್ಳಾಗಿ ಕಾಡತೊಡಗಿದೆ.
ಈಗಾಗಲೇ ಮಂಡ್ಯದಿಂದ ಸ್ಫರ್ಧಿಸೋ ಇಂಗಿತ ವ್ಯಕ್ತಪಡಿಸಿರೋ ನಿಖಿಲ್ ಕುಮಾರಸ್ವಾಮಿ, ಸುಮಲತಾ ಹಠಕ್ಕೆ ಸೋಲೊಪ್ಪಿಕೊಂಡು ಮೈಸೂರಿನತ್ತ ಹೆಜ್ಜೆ ಹಾಕಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಮಂಡ್ಯದ ಬೆಲ್ಲ ಜೆಡಿಎಸ್ ಗೆ ಫಿಕ್ಸ್, ಸುಮಲತಾಗಿಲ್ಲ ಕೈ ಟಿಕೆಟ್!
ಇದಕ್ಕೆ ಪೂಕರವೆಂಬಂತೆ ನಿನ್ನೆ [ಶುಕ್ರವಾರ] ತಡರಾತ್ರಿವರೆಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಾಯಲ್ ಆರ್ಕಿಡ್ ಹೊಟೇಲ್ ನಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೌಪ್ಯ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮೈಸೂರು, ಮಂಡ್ಯ ಜೆಡಿಎಸ್ ನಾಯಕರು ಭಾಗಿಯಾಗಿದ್ದು, ಪುತ್ರನ ನಿರಾಯಸ ಗೆಲುವಿಗೆ ಸೂಕ್ತ ಕ್ಷೇತ್ರ ಆಯ್ಕೆ ಬಗ್ಗೆ ಸಮಲೋಚನೆ ನಡೆಸಿದರು.
ಮಂಡ್ಯದಿಂದ ಸುಮಲತಾ ಅಂಬರೀಶ್, ಸ್ವತಂತ್ರವಾಗಿ ಸ್ಪರ್ಧಿಸಿದ್ರೆ ಅವರಿಗೆ ಅಂಬರೀಶ್ ಅನುಕಂಪ ಕೈಹಿಡಿಯಲಿದೆ. ಈಗಾಗಿ ನಿಖಿಲ್ ಗೆಲುವು ಕಷ್ಟ ಎನ್ನುವುದು ಅರಿತಿರುವ ಕುಮಾರಸ್ವಾಮಿ, ಸೂಕ್ತ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದರು.
ಒಂದು ವೇಳೆ ಸುಮಲತಾ ಅಂಬರೀಶ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ ಬಿಜೆಪಿ ಸಹ ಬೆಂಬಲ ಸೂಚಿಸುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ದಳಪತಿಗೆ ಸೋಲಿನ ಭೀತಿ ಕಾಡತೊಡಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.