ಕತಾರ್‌ನಲ್ಲಿ ಪತಂಜಲಿ ಉತ್ಪನ್ನಗಳಿಗೆ ನಿಷೇಧ?: ಅಸಲಿ ಕಹಾನಿ ಏನು?

By Web DeskFirst Published Oct 11, 2018, 10:02 PM IST
Highlights

ಕತಾರ್‌ನಲ್ಲಿ ಬ್ಯಾನ್ ಆಯ್ತಾ ಪತಂಜಲಿ ಪ್ರೊಡೆಕ್ಟರ್! ಅಪಾಯಕಾರಿ ರಾಸಾಯನಿಕ ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧ! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ! ದಾಖಲೆ ಸಮೇತ ಆರೋಪ ನಿರಾಕರಿಸಿದ ಪತಂಜಲಿ ಸಂಸ್ಥೆ

ನವದೆಹಲಿ(ಅ.11): ಅಪಾಯಕಾರಿ ಕೆಮಿಕಲ್ಸ್ ಗಳನ್ನು ಬಳಕೆ ಮಾಡುತ್ತಿರುವ ಆರೋಪದ ಮೇಲೆ ಪತಂಜಲಿ ಉತ್ಪನ್ನಗಳ ಮೇಲೆ ಕತಾರ್ ನಿರ್ಬಂಧ ವಿಧಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

Patanjali products Banned in Qatar. Excessive use of chemicals detected in all products. Baba Ramdev claims he is manufacturing 100% Natural products. Indian media not covering it, as Patanjali ads are a huge source of revenue for channels.. pic.twitter.com/kuyG7kzLg8

— Vivek pandey (@Vivekpandey21)

ಪತಂಜಲಿಯ ಎಲ್ಲಾ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾದ ಹಿನ್ನೆಲೆಯಲ್ಲಿ ಪತಂಜಲಿ ಉತ್ಪನ್ನಗಳ ಮೇಲೆ ಕತಾರ್ ನಿರ್ಬಂಧ ಹೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಸುದ್ದಿಯನ್ನು ನಿರಾಕರಿಸಿರುವ ಪತಂಜಲಿ ಸಂಸ್ಥೆ, ದುರುದ್ದೇಶಪೂರ್ವಕವಾಗಿ ಸಂಸ್ಥೆ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂದು ಹರಿಹಾಯ್ದಿದೆ.

News of ban on Products in is misleading..
Look yourself in the light of attached documents:
1. NOC by Qatar Govt.
2. Eng translation of NOC
3. Notification clearly showing that Halal Certificate was demanded
4. Halal Certificate of
Products pic.twitter.com/3AcROMZkIA

— Tijarawala SK (@tijarawala)

ವಿವೇಕ್ ಪಾಂಡೆ ಎಂಬುವವರ ಟ್ವೀಟರ್ ಅಕೌಂಟ್‌ನಲ್ಲಿ ಪತಂಜಲಿ ಉತ್ಪನ್ನಗಳಿಗೆ ಕತಾರ್ ನಿಷೇಧ ಹೇರಿರುವ ಕುರಿತು ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪತಂಜಲಿ ವಕ್ತಾರ ಎಸ್.ಕೆ. ತಿಜಾರವಾಲಾ, ದಾಖಲೆ ಸಮೇತ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

click me!