ಸಿಖ್ ಮಹಿಳೆಯರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ

By Web DeskFirst Published Oct 11, 2018, 9:10 PM IST
Highlights

ಕೇಂದ್ರ ಗೃಹ ಇಲಾಖೆ ಚಂಡೀಗಡ ಜಿಲ್ಲಾಡಳಿತಕ್ಕೆ ಸುತ್ತೋಲೆ ಹೊರಡಿಸಿದ್ದು ದ್ವಿಚಕ್ರ ವಾಹನ ಚಲಾಯಿಸುವ ಸಿಖ್ ಮಹಿಳೆಯರಿಗೆ ಹೆಲ್ಮೆಟ್'ನಿಂದ  ವಿನಾಯಿತಿ ನೀಡುವಂತೆ ಆದೇಶ ನೀಡಿದೆ.

ಚಂಡೀಗಡ(ಅ.11): ಚಂಡೀಗಡ ಸಿಖ್ ಮಹಿಳೆಯರಿಗೆ ಹೆಲ್ಮೆಟ್'ನಿಂದ ವಿನಾಯಿತಿ ನೀಡಲು ಅಲ್ಲಿನ ಜಿಲ್ಲಾಡಳಿತ ನಿರ್ಧರಿಸಿದೆ. ಶಿರೋಮಣಿ ಅಕಾಲಿ ದಳದ ಮುಖ್ಯಸ್ಥರಾದ ಸುಖ್ಬೀರ್ ಸಿಂಗ್ ಬಾದಲ್ ಅವರು ಸಿಖ್ ಸಂಘಟನೆಗಳೊಂದಿಗೆ ಕೇಂದ್ರ ಗೃಹ ಸಚಿವ ರಾಜ್'ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಈ ಆದೇಶವನ್ನು ಜಾರಿಗೊಳಿಸಲಾಗಿದೆ.

ಕೇಂದ್ರ ಗೃಹ ಇಲಾಖೆ ಚಂಡೀಗಡ ಜಿಲ್ಲಾಡಳಿತಕ್ಕೆ ಸುತ್ತೋಲೆ ಹೊರಡಿಸಿದ್ದು ದ್ವಿಚಕ್ರ ವಾಹನ ಚಲಾಯಿಸುವ ಸಿಖ್ ಮಹಿಳೆಯರಿಗೆ ಹೆಲ್ಮೆಟ್'ನಿಂದ ವಿನಾಯಿತಿ ನೀಡುವಂತೆ ಆದೇಶ ನೀಡಿದೆ. 

ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ದೆಹಲಿ ಮೋಟಾರು ಕಾಯಿದೆ 1993ರ 115 ನಿಯಮದ ತಿದ್ದುಪಡಿಯಂತೆ ಜೂನ್ 4, 1999 ರಂದು ಅಧಿಸೂಚನೆ ಹೊರಡಿಸಿ ಮೋಟಾರು ಬೈಕ್ ಚಲಾಯಿಸುವ ಮಹಿಳೆಯರು ಐಚ್ಛಿಕವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿತ್ತು. 2014, ಆಗಸ್ಟ್ 28ರ  ಮತ್ತೊಂದು ಅಧಿಸೂಚನೆಯ ಪ್ರಕಾರ ಮಹಿಳೆಯರ ಬದಲಾಗಿ ಸಿಖ್ ಮಹಿಳೆಯರು ಎಂದು ಮಾರ್ಪಡಿಸಲಾಗಿದೆ.

click me!