
ಕೋಲಂಬೋ(ಅ.11): ಜಗತ್ತಿನಲ್ಲಿ ಅದೆಂತಾ ವಿಸ್ಮಯಗಳು ಸಂಭವಿಸುತ್ತವೆ ನೋಡಿ. ಕುಡಿದ ಮತ್ತಿನಲ್ಲಿ ಬ್ರಿಟನ್‌ನ ನವಜೋಡಿಯೊಂದು ಹನಿಮೂನ್‌ಗಾಗಿ ಶ್ರೀಲಂಕಾದಲ್ಲಿರುವ ಇಡೀ ಹೊಟೇಲ್‌ನ್ನೇ ಖರೀದಿಸಿದ ಘಟನೆ ನಡೆದಿದೆ.
ಬ್ರಿಟನ್ ನ ಜಿನಾ ಲೈನ್ಸ್ ಮತ್ತು ಮಾರ್ಕ್ ಲೀ ಎಂಬ ನವಜೋಡಿ ಹನಿಮೂನ್‌ಗೆಂದು ಶ್ರೀಲಂಕಾಗೆ ಬಂದಿದ್ದಾರೆ. ಈ ವೇಳೆ ತಮ್ಮ ಹನಿಮೂನ್‌ಗೆಂದು ಹೊಟೇಲ್ ವೊಂದನ್ನು ಬುಕ್ ಮಾಡಿದ್ದಾರೆ. ಮೊದಲ ರಾತ್ರಿ ಕಂಠಪೂರ್ತಿ ಕುಡಿದ ಜೋಡಿ, ಹೊಟೇಲ್ ಖರೀದಿಗೆ ಮನಸ್ಸು ಮಾಡಿದೆ.
ಅದರಂತೆ ಕುಡಿದ ಅಮಲಿನಲ್ಲೇ ಸುಮಾರು 29 ಲಕ್ಷ ರೂ. ಗೆ ಸಂಪೂರ್ಣ ಹೊಟೇಲ್ ಖರೀದಿ ಮಾಡಿದೆ ಈ ನವಜೋಡಿ. ಅಷ್ಟೇ ಅಲ್ಲದೇ ಹೊಟೇಲ್‌ನ್ನು ಕೆಲಕಾಳ ಮುಚ್ಚಿ ತಮಗಿಷ್ಟ ಬಂದಂತೆ ಮೋಜು ಮಸ್ತಿ ಮಾಡಿ, ಇದೀಗ ಮತ್ತೆ ಹೊಟೇಲ್‌ನ್ನು ತೆರೆದಿದ್ದಾರೆ.
ಸದ್ಯ ಹೋಟೆಲ್‌ನ್ನು ಮತ್ತೆ ತೆರೆದಿರುವ ಜಿನಾ ಮತ್ತು ಲೀ ಜೋಡಿ, ಅದಕ್ಕೆ ಲಕ್ಕಿ ಬೀಚ್ ಎಂದು ಮರುನಾಮಕರಣ ಕೂಡ ಮಾಡಿದೆ. ಇದೀಗ ಮತ್ತೆ ಗ್ರಾಹಕರು ಈ ಹೋಟೆಲ್‌ಗೆ ಬರುತ್ತಿದ್ದು, ಇದರ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಹಳೆಯ ಮ್ಯಾನೇಜ್ ಮೆಂಟ್ ಗೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.