
‘ಕಾಶ್ಮೀರದ ಬಂಡೀಪುರಲ್ಲಿರುವ ಮನೆಗಳನ್ನು ಭಾರತದ ಸೈನಿಕರು ಸುಟ್ಟುಹಾಕಿದ್ದಾರೆ. ಈಗಲೂ ನಾವು ಈ ದೌರ್ಜನ್ಯ, ಅಟ್ಟಹಾಸದ ವಿರುದ್ಧ ಧ್ವನಿ ಎತ್ತದಿದ್ದರೆ ನಿಮ್ಮ ಫೇಸ್‌ಬುಕ್ ಅನ್ನೇ ತ್ಯಜಿಸಿಬಿಡಿ’ ಎಂಬ ಒಕ್ಕಣೆಯೊಂದಿಗೆ ಮನೆಗಳು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದೆ. ವಿಡಿಯೋದಲ್ಲಿ ಜನರು ಕಿರುಚಾಡುತ್ತಿರುವ ಧ್ವನಿ ಕೇಳಿಸುತ್ತದೆ. ಆದರೆ ನಿಜಕ್ಕೂ ಭಾರತದ ಸೈನಿಕರು ಕಾಶ್ಮೀರದಲ್ಲಿ ಮನೆಗಳಿಗೆ ಬೆಂಕಿ ಇಟ್ಟಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.
ಯುಟ್ಯೂಬ್‌ನಲ್ಲಿ ಹುಡುಕ ಹೊರಟಾಗ ‘ಇದು ಕಾಶ್ಮೀರದ ಉರಿ ಪ್ರದೇಶದಲ್ಲಿ ನಡೆದ ಒಂದು ಘಟನೆಯ ದೃಶ್ಯ. ನಾಲ್ಕು ಮನೆಗಳು ವಿದ್ಯುತ್ ಅವಘಡದಿಂದಾಗಿ ಭಸ್ಮವಾಗಿವೆ’ ಎಂದು ಎಂಬ ವಿವರಣೆಯೊಂದಿಗೆ ಪೋಸ್ಟ್ ಮಾಡಲಾಗಿತ್ತು. ಆಲ್ಟ್‌ನ್ಯೂಸ್ ಮತ್ತಷ್ಟು ಪರಿಶೀಲನೆ ನಡೆಸಿದ್ದು, ಜಮ್ಮು-ಕಾಶ್ಮೀರದ ಪ್ರಖ್ಯಾತ ಛಾಯಾಚಿತ್ರ ವರದಿಗಾರ ಪೀರ್‌ಜಾದ ವಸೀಮ್ ಎಂಬುವವರನ್ನು ಸಂಪರ್ಕಿಸಿ ಸ್ಪಷ್ಟೀಕರಣ ಪಡೆದಿದೆ.
ಅವರೂ ಕೂಡ ‘2018 ಮಾಚ್‌ರ್ 27ರಂದು ನಾಲ್ಕು ಮನೆಗಳು ಕಾಶ್ಮೀರ ಬರಮುಲ್ಲಾ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದವು. ಈ ಪ್ರದೇಶದ ಸಮೀಪದಲ್ಲಿ ಅಗ್ನಿಶಾಮಕದಳ ಇಲ್ಲವಾದ್ದರಿಂದ ಪರಿಸ್ಥಿತಿ ಇನ್ನಷ್ಟುಗಂಭೀರವಾಗಿತ್ತು ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಆರೋಪಿದ್ದರು. ಇದನ್ನು ನನ್ನ ಇಂಸ್ಟಾಗ್ರಾಮ್‌ನಲ್ಲೂ ಪೋಸ್ಟ್ ಮಾಡಿದ್ದೆ’ ಎಂದು ಹೇಳಿದ್ದಾರೆ. ಹಾಗಾಗಿ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ