ಕಾಂಗ್ರೆಸ್‌ಗೆ ಸ್ವಾಮೀಜಿಗಳ ಬೆಂಬಲ!

By Web DeskFirst Published Nov 24, 2018, 10:08 AM IST
Highlights

ಈ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ನೂರಾರು ಸ್ವಾಮೀಜಿಗಳ ಬೆಂಬಲ ಲಭ್ಯವಾಗಿದೆ. ಮತದಾನಕ್ಕೆ ಬೆರಳೆಣಿಕೆ ದಿನಗಳು ಬಾಕಿಯಿರುವಾಗಲೇ ನೂರಾರು ಧರ್ಮಗುರುಗಳು ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಭೋಪಾಲ್‌[ನ.24]: ಶತಾಯು-ಗತಾಯ ಈ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ನೂರಾರು ಸ್ವಾಮೀಜಿಗಳ ಬೆಂಬಲ ಲಭ್ಯವಾಗಿದೆ. ಮತದಾನಕ್ಕೆ ಬೆರಳೆಣಿಕೆ ದಿನಗಳು ಬಾಕಿಯಿರುವಾಗಲೇ ನೂರಾರು ಧರ್ಮಗುರುಗಳು ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ ವಿಡಿಯೋ ವೈರಲ್

ನರ್ಮದೆ ಸಂಸದ್‌ ಕಾರ್ಯಕ್ರಮ ನಿಮಿತ್ತ ಶುಕ್ರವಾರ ನರ್ಮದಾ ತೀರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಸ್ವಾಮೀಜಿಗಳು, ‘ಮುಂದಿನ ಐದು ವರ್ಷಗಳ ಕಾಲ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅವಕಾಶ ಮಾಡಿಕೊಡಬೇಕಿದೆ,’ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಾವು ನೀಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಬಿಗ್ ಶಾಕ್: ಚುನಾವಣೆಗೆ ನಿಲ್ಲಲ್ಲ ಎಂದ ಸುಷ್ಮಾ!

ಈ ವೇಳೆ ಪ್ರತಿಕ್ರಿಯಿಸಿದ ಇತ್ತೀಚೆಗಷ್ಟೇ ಬಿಜೆಪಿ ಜೊತೆ ಮುನಿಸಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಂಪ್ಯೂಟರ್‌ ಬಾಬಾ ಎಂದೇ ಖ್ಯಾತರಾದ ನಾಮ್‌ದೇವ್‌ ದಾಸ್‌ ತ್ಯಾಗಿ ಸಹ, ಬಿಜೆಪಿ ವಿರುದ್ಧ ಹರಿಹಾಯ್ದರು. ಇಷ್ಟುದಿನಗಳ ಕಾಲ ಸ್ವಾಮೀಜಿಗಳು ಬಿಜೆಪಿಗೆ ಬೆಂಗಾವಲಾಗಿ ನಿಂತಿದ್ದರು. ಆದರೆ, ಇದೀಗ ಶ್ರೀಗಳೆಲ್ಲರೂ ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ ಎಂದು ತಿಳಿಸಿದರು.

click me!