
ಭಾರತದ ಅತಿದೊಡ್ಡ ಸಿನಿಮಾ ಥಿಯೇಟರ್ ವೊಂದು ಗುಜರಾತಿನ ವಡೋದರಾದಲ್ಲಿ ನಿರ್ಮಾಣವಾಗಿದ್ದು, ಇದೇ ಜೂನ್ 26ರಂದು ಅದರ ಉದ್ಘಾಟನೆ ನಡೆಯಲಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಹಾಗೇ ಈ ಸಿನಿಮಾ ಮಂದಿರಕ್ಕೆ ಹೋಗಬೇಕೆನ್ನುವವರು 800 ರು. ಪಾವತಿಸಬೇಕೆಂದೂ ಹೇಳಲಾಗಿದೆ. ಈ ಸಂದೇಶದೊಂದಿಗೆ ಅತಿದೊಡ್ಡ ರಿಲಯನ್ಸ್ ಸಿನಿಮಾ ಮಾಲ್‌ನ ಪೋಟೋವೊಂದನ್ನು ಪ್ರಕಟಿಸಲಾಗಿದೆ. ಸಾಕಷ್ಟು ಜನ ಈ ಸಂದೇಶವನ್ನು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್ ಗಳಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾ ಮಂದಿರದ ವಿಶೇಷ ಎಂದರೆ ಇದರೊಳಗೆ ಮಲಗಿಕೊಂಡು ಸಿನಿಮಾ ನೋಡಬಹುದು ಎನ್ನಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಗುಜರಾತಿನ ವಡೋದರಾದಲ್ಲಿ ದೇಶದ ಅತಿದೊಡ್ಡ ಸಿನಿಮಾ ಮಂದಿರ ನಿರ್ಮಾಣವಾಗಿದೆಯೇ ಎಂದು ‘ಬೂಮ್ ಲೈವ್’ ಹುಡುಕ ಹೊರಟಾಗ ಈ ಸಂದೇಶದ
ಹಿಂದಿನ ಅಸಲಿ ಕತೆ ಬಯಲಗಿದೆ.
ಬೂಮ್ ಲೈವ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳನ್ನೇ ಹುಡುಕಿ ಪರಿಶೀಲಿಸಿದ್ದು, ಈ ವೇಳೆ ಸಿಕ್ಕ ಚಿತ್ರವೊಂದರಲ್ಲಿರುವ ದಿಂಬುಗಳ ಮೇಲೆ ‘ಬುದಾ ಬೆಡ್ ಸಿನಿಮಾ’ ಎಂಬ ಹೆಸರಿರುವುದು ಪತ್ತೆಯಾಗಿದೆ. ಇದೇ ಜಾಡನ್ನು ಹಿಡಿದು ಹುಡುಕ ಹೊರಟಾಗ ಈ ರೀತಿಯ ಸಿನಿಮಾ ಮಂದಿರವಿರುವುದು ಭಾರತದಲ್ಲಲ್ಲ, ಬದಲಾಗಿ ಹಂಗೇರಿಯಾದಲ್ಲಿ ಎಂಬುದು ಸಾಬೀತಾಗಿದೆ. ಅಲ್ಲದೆ ಈ ಕುರಿತ ಲೇಖನ ಕೂಡ ದೊರಕಿದ್ದು, ಅದರಲ್ಲಿ 2014 ನವೆಂಬರ್‌ನಲ್ಲಿ ಹಂಗೇರಿಯಾದಲ್ಲಿ ಈ ರೀತಿಯ ಸಿನಿಮಾ ಮಂದಿರವೊಂದು ನಿರ್ಮಾಣವಾಗಿದೆ ಎಂದಿದೆ.
ಕೇಂದ್ರ ಯುರೋಪಿನಲ್ಲಿಯೇ ಇದು ಪ್ರಥಮ ಸ್ಪ್ರಿಂಗ್‌ಬೆಡ್ ಸಿನಿಮಾ ಥಿಯೇಟರ್. ವಡೋದರಾದಲ್ಲಿ ರಿಲಯನ್ಸ್ ಮಾಲ್ ಇರುವುದು ಸತ್ಯ ಆದರೆ ಈ ರೀತಿಯ ಅತ್ಯಾಧುನಿಕ ಸಿನಿಮಾ ಮಂದಿರ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.