ದೇಶದ ಸರ್ಕಾರಿ ಬ್ಯಾಂಕುಗಳಿಗೆ ಭಾರಿ ನಷ್ಟ

First Published Jun 11, 2018, 9:30 AM IST
Highlights

2017-18ನೇ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟಾರೆ 87,357 ಕೋಟಿ ರು. ನಷ್ಟಅನುಭವಿಸಿವೆ. ಈ ಪೈಕಿ ವಜ್ರೋದ್ಯಮಿ ನೀರವ್‌ ಮೋದಿ ಹಗರಣದಿಂದ ಜರ್ಜರಿತವಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸುಮಾರು 12,283 ಕೋಟಿ ರು. ಲುಕ್ಸಾನಿಗೆ ಒಳಗಾಗಿದೆ. 

ನವದೆಹಲಿ: 2017-18ನೇ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟಾರೆ 87,357 ಕೋಟಿ ರು. ನಷ್ಟಅನುಭವಿಸಿವೆ. ಈ ಪೈಕಿ ವಜ್ರೋದ್ಯಮಿ ನೀರವ್‌ ಮೋದಿ ಹಗರಣದಿಂದ ಜರ್ಜರಿತವಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸುಮಾರು 12,283 ಕೋಟಿ ರು. ಲುಕ್ಸಾನಿಗೆ ಒಳಗಾಗಿದೆ. ನಂತರದ ಸ್ಥಾನದಲ್ಲಿ ಐಡಿಬಿಐ ಬ್ಯಾಂಕ್‌ ಇದೆ.

ದೇಶದಲ್ಲಿ ಸರ್ಕಾರಿ ಸ್ವಾಮ್ಯದ 21 ಬ್ಯಾಂಕುಗಳಿವೆ. ವಿಶೇಷ ಎಂದರೆ, ಅಷ್ಟೂಬ್ಯಾಂಕುಗಳ ಪೈಕಿ ಲಾಭ ಗಳಿಸಿರುವುದು ಕೇವಲ ಎರಡು ಮಾತ್ರ. ಇಂಡಿಯನ್‌ ಬ್ಯಾಂಕ್‌ 1258.99 ಕೋಟಿ ರು. ಲಾಭ ಗಳಿಸಿದ್ದರೆ, ಕರ್ನಾಟಕ ಮೂಲದ ವಿಜಯಾ ಬ್ಯಾಂಕು 727.02 ಕೋಟಿ ರು. ಲಾಭ ಸಂಪಾದಿಸಿದೆ. ಮಿಕ್ಕಂತೆ 19 ಸರ್ಕಾರಿ ಬ್ಯಾಂಕುಗಳು 87,357 ಕೋಟಿ ರು. ನಷ್ಟಕ್ಕೆ ಒಳಗಾಗಿವೆ.

ಅತ್ಯಧಿಕ ನಷ್ಟಕ್ಕೆ ಒಳಗಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕು 2016-17ನೇ ಸಾಲಿನಲ್ಲಿ 1324.8 ಕೋಟಿ ರು. ಲಾಭ ಕಂಡಿತ್ತು. ಕಳೆದ ವರ್ಷ 8237 ಕೋಟಿ ರು. ನಷ್ಟಕಂಡಿರುವ ಐಡಿಬಿಐ ಬ್ಯಾಂಕು ಅದಕ್ಕೂ ಹಿಂದಿನ ವರ್ಷ 5158 ರು. ನಷ್ಟಕ್ಕೊಳಗಾಗಿತ್ತು.

2016-17ನೇ ಸಾಲಿನಲ್ಲಿ 10484 ಕೋಟಿ ರು. ಲಾಭ ಕಂಡಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ 2017-18ನೇ ಸಾಲಿನಲ್ಲಿ 6547.45 ಕೋಟಿ ರು. ನಷ್ಟಅನುಭವಿಸಿದೆ.

click me!