ವೈರಲ್ ಚೆಕ್| ಪುಲ್ವಾಮಾ ದಾಳಿ ಬಿಜೆಪಿ ಗಿಮಿಕ್ ಅಂತೆ!: ಸುದ್ದಿಯಾಚೆಗಿನ ಸತ್ಯ ಇಲ್ಲಿದೆ

By Web DeskFirst Published Mar 6, 2019, 1:59 PM IST
Highlights

ಪುಲ್ವಾಮಾ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯವೇನು? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ.

ನವದೆಹಲಿ[ಮಾ.06]: ಪುಲ್ವಾಮಾ ದಾಳಿ ಸಂಪೂರ್ಣ ನಿಯೋಜಿತ ಎಂಬ ಸಂದೇಶದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವಿ ದಂಡಿಯಾ ಎಂಬುವವರು ಫೇಸ್‌ಬುಕ್ ಲೈವ್‌ನಲ್ಲಿ ಈ ಆಡಿಯೋ ಬಿಡುಗಡೆ ಮಾಡಿದ್ದು, ಪುಲ್ವಾಮಾ ದಾಳಿಯನ್ನು ಬಿಜೆಪಿ ಮಾಡಿಸಿದೆ ಎಂದು ಆರೋಪಿಸ ಲಾಗಿ. ಇದನ್ನು ಲಕ್ಷಾಂತರ ಜನರು ನೋಡಿ ಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ಅಮಿತ್ ಶಾ ರಾಷ್ಟ್ರದ ಜನತೆ ಯನ್ನು ದಾರಿತಪ್ಪಿಸಬೇಕಿದೆ. ಮುಂದಿನ ಚುನಾವಣೆಗೆ ಯುದ್ಧ ಆಗಲೇಬೇಕಿದೆ ಎನ್ನುತ್ತಾರೆ. ಅದಕ್ಕೆ ಮಹಿಳೆಯೊಬ್ಬರು ಬೇಕು ಎಂದ ಕೂಡಲೇ ಯುದ್ಧ ನಡೆಯುವುದಿಲ್ಲ ಎನ್ನುತ್ತಾರೆ. ಈ ವೇಳೆ ರಾಜನಾಥ್ ಸಿಂಗ್ ಯೋಧರ ವಿಷಯದಲ್ಲಿ ನಮ್ಮ ದೇಶ ತುಂಬಾ ಸೂಕ್ಷ್ಮ. ಈ ವಿಷಯ ಅವರನ್ನು ಭಾವನಾತ್ಮಕ ಗೊಳಿಸುತ್ತದೆ ಎನ್ನುತ್ತಾರೆ. ಆಗ ಮಹಿಳೆ, ಜಮ್ಮು-ಶ್ರೀನಗರದಲ್ಲಿ ಬಾಂಬ್ ಸ್ಪೋಟಿಸುತ್ತೇವೆ. ಇದರಲ್ಲಿ 100-150 ಯೋಧ ರು ಸತ್ತರೆ ದೇಶಭಕ್ತಿ ಹೆಚ್ಚುತ್ತದೆ ಎಂದಿದ್ದಾರೆ

ಆದರೆ ಇದು ಅಸಲಿ ಆಡಿಯೋವೇ ಎಂದು ಕ್ವಿಂಟ್ ಪರಿಶೀಲಿಸಿದಾಗ ಇದೊಂದು ಸಂಪೂರ್ಣ ನಕಲಿ ಎಂದು ತಿಳಿದು ಬಂದಿದೆ.

click me!