ಪಟೇಲರ ಪ್ರತಿಮೆ ಎದುರೇ ಕರುಳು ಹಿಂಡುವ ಬಡತನದ ಅನಾವರಣ?

Published : Nov 01, 2018, 12:28 PM IST
ಪಟೇಲರ ಪ್ರತಿಮೆ ಎದುರೇ ಕರುಳು ಹಿಂಡುವ ಬಡತನದ ಅನಾವರಣ?

ಸಾರಾಂಶ

ಸದ್ಯ ಸರ್ದಾರ್ ಪಟೇಲ್ ಅವರ ಎತ್ತರದ ಪ್ರತಿಮೆಯ ಪಕ್ಕದಲ್ಲಿ ಕಡುಬಡತನದ ಆದಿವಾಸಿ ಕುಟುಂಬವೊಂದು ಬಯಲಿನಲ್ಲಿಯೇ  ಆಹಾರ ಬೇಯಿಸಿ ಮಕ್ಕಳಿಗೆ ನೀಡುತ್ತಿರುವ ಕರುಣಾಜನಕ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು :  ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿ ಪಡೆದಿರುವ  ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯು ಗುಜರಾತ್‌ನ ಸರ್ದಾರ್ ಸರೋವರ ತಟದಲ್ಲಿ ನಿರ್ಮಾಣಗೊಂಡು ಬುಧವಾರ ಲೋಕಾರ್ಪ ಣೆಗೊಂಡಿದೆ. ಈ ಗಗನಚುಂಬಿ ಪ್ರತಿಮೆ ಬೇಕೇ ಬೇಡವೇ ಎಂಬ ಬಗ್ಗೆ ವಾದ ವಿವಾದಗಳೂ ಇವೆ. 

ಆದರೆ ಸದ್ಯ ಸರ್ದಾರ್ ಪಟೇಲ್ ಅವರ ಎತ್ತರದ ಪ್ರತಿಮೆಯ ಪಕ್ಕದಲ್ಲಿ ಕಡುಬಡತನದ ಆದಿವಾಸಿ ಕುಟುಂಬವೊಂದು ಬಯಲಿನಲ್ಲಿಯೇ  ಆಹಾರ ಬೇಯಿಸಿ ಮಕ್ಕಳಿಗೆ ನೀಡುತ್ತಿರುವ ಕರುಣಾಜನಕ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋವನ್ನು ಶೇರ್ ಮಾಡಿ, ‘ಸರ್ದಾರ್ ಪಟೇಲರು ಇಂದು ಜೀವಂತವಾಗಿದ್ದಿದ್ದರೆ, ತನ್ನ ಪ್ರತಿಮೆ ನಿರ್ಮಾಣಕ್ಕೆ ಬುಡಕಟ್ಟು ಜನಾಂಗದ ಜನರನ್ನುತಮ್ಮ ಮನೆ ಮತ್ತು ಹೊಲವನ್ನು ತೊರೆದು ಒಕ್ಕಲೆಬ್ಬಿಸಲು ಒಪ್ಪುತ್ತಿದ್ದರೇ?’ ಎಂದು ಒಕ್ಕಣೆ ಬರೆಯಲಾಗಿದೆ. 

ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಬೆಂಬಲಿಗರು ಇದನ್ನು ಹೆಚ್ಚು ಶೇರ್ ಮಾಡುತ್ತಿದ್ದು,  ಸದ್ಯ #statue ofdisplacement  ಎಂಬ ಹ್ಯಾಶ್‌ಟ್ಯಾಗ್
ನೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ. ಆದರೆ ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣವಾದ ಜಾಗದಲ್ಲಿ ಆದಿವಾಸಿ ಕುಟುಂಬದ ಮಹಿಳೆ ತನ್ನ ಇಬ್ಬರು ಮಕ್ಕಳಿಗೆ ಬಯಲಿನಲ್ಲಿಯೇ ಆಹಾರ ಬೇಯಿಸಿಕೊ ಡುತ್ತಿದ್ದುದು ನಿಜವೇ ಎಂದು ಪರಿಶೀಲಿಸಿದಾಗ, ಇದು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ ಎಂಬುದು ಸಾಬೀತಾಗಿದೆ. 

ಈ ಫೋಟೋದ ಜಾಡು ಹಿಡಿದು ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್ ಆಗಿರುವ ಆದಿವಾಸಿ ಕುಟುಂಬದ ಫೋಟೋ 8 ವರ್ಷ ಹಳೆಯದ್ದು, ಅಂದರೆ ಈ ಫೋಟೋವನ್ನು ೨೦೧೦ರಲ್ಲಿ, ಗುಜರಾತಿನ ಅಹಮದಾಬಾದ್‌ನಲ್ಲಿ ಅಮಿತ್ ದಾವೆ ಎಂಬುವರು ಕ್ಲಿಕ್ಕಿಸಿದ್ದರು ಎಂಬುದು ಪತ್ತೆಯಾಗಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾ: ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ
ದಿಲ್ಲಿ ಸ್ಫೋಟ ನಂಟಿನ ಅಲ್‌ ಫಲಾ ವಿವಿಯ ₹140 ಕೋಟಿ ಆಸ್ತಿ ಜಪ್ತಿ