ಈ ಹುಡುಗ ಹಾಡಿದ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್; ಈತ ನಿಜಕ್ಕೂ ಸೇನಾಧಿಕಾರಿಯ ಮಗನಾ?

Published : Apr 02, 2018, 12:39 PM ISTUpdated : Apr 14, 2018, 01:13 PM IST
ಈ ಹುಡುಗ ಹಾಡಿದ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್; ಈತ ನಿಜಕ್ಕೂ ಸೇನಾಧಿಕಾರಿಯ ಮಗನಾ?

ಸಾರಾಂಶ

ಬಾಲಕನೊಬ್ಬ ಹಾಡು ಹಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಕಾರಣ ಆ  ವಿಡಿಯೋದ ಕೆಳಗೆ, ‘ಬಾಲಕನ ಆತ್ಮವಿಶ್ವಾಸ ನೋಡಿ.. ಈತ ಭಾರತೀಯ ಸೇನಾಧಿಕಾರಿಯ ಮಗ. ಶತ್ರು ದೇಶದ ಸೈನಿಕರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಈತನ ತಂದೆ ಮೃತಪಟ್ಟರು. ಈ ಸುದ್ದಿಯನ್ನು ಕೇಳಿ ಆತಂಕಕ್ಕೊಳಗಾಗಿ ಈತನ  ತಾಯಿಯೂ ಮೃತಪಟ್ಟಿದ್ದಾರೆ. ಈ ಬಾಲಕ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾನೆ’  ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಈ ವಿಡಿಯೋವನ್ನು ಇಂಡಿಯನ್ ಆರ್ಮಿ  ಫೇಸ್‌ಬುಕ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು ಆತ್ಮಸ್ಥೈರ್ಯ ತುಂಬುವ ಕಾಮೆಂಟ್'ಗಳನ್ನೂ ಮಾಡಲಾಗಿದೆ. ಹಲವರು ಶೇರ್ ಕೂಡ  ಮಾಡಿದ್ದಾರೆ.

ಬೆಂಗಳೂರು (ಏ. 02):  ಬಾಲಕನೊಬ್ಬ ಹಾಡು ಹಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಕಾರಣ ಆ  ವಿಡಿಯೋದ ಕೆಳಗೆ, ‘ಬಾಲಕನ ಆತ್ಮವಿಶ್ವಾಸ ನೋಡಿ.. ಈತ ಭಾರತೀಯ ಸೇನಾಧಿಕಾರಿಯ ಮಗ. ಶತ್ರು ದೇಶದ ಸೈನಿಕರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ
ಈತನ ತಂದೆ ಮೃತಪಟ್ಟರು. ಈ ಸುದ್ದಿಯನ್ನು ಕೇಳಿ ಆತಂಕಕ್ಕೊಳಗಾಗಿ ಈತನ  ತಾಯಿಯೂ ಮೃತಪಟ್ಟಿದ್ದಾರೆ. ಈ ಬಾಲಕ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾನೆ’  ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಈ ವಿಡಿಯೋವನ್ನು ಇಂಡಿಯನ್ ಆರ್ಮಿ  ಫೇಸ್‌ಬುಕ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು ಆತ್ಮಸ್ಥೈರ್ಯ ತುಂಬುವ ಕಾಮೆಂಟ್'ಗಳನ್ನೂ ಮಾಡಲಾಗಿದೆ. ಹಲವರು ಶೇರ್ ಕೂಡ  ಮಾಡಿದ್ದಾರೆ.

ಆದರೆ ಈ ವಿಡಿಯೋದಲ್ಲಿರುವ ಬಾಲಕ ನಿಜಕ್ಕೂ  ಭಾರತೀಯ ಸೇನಾಧಿಕಾರಿ  ಮಗನೇ ಎಂದು ಹುಡುಕಹೊರಟಾಗ ಈ ವಿಡಿಯೋ  ಹಿಂದಿನ ಅಸಲಿ ಕತೆ  ಬಯಲಾಗಿದೆ. ಏಕೆಂದರೆ ಈ  ಬಾಲಕ ಭಾರತೀಯ ಯೋಧನ ಮಗ ಅಲ್ಲ. ಈತನ ಹೆಸರು ಗುಲಾಮ್-ಇ-ಮುರ‌್ತಾಜಾ.
ಇವನು ಪಾಕಿಸ್ತಾನದ ಕಿರಿಯ ಕಲಾವಿದ. ಅಂದ ಹಾಗೆ ಗುಲಾಮ್‌ನ ಪೋಷಕರು  ಮೃತಪಟ್ಟಿಲ್ಲ. ಈತನ ತಂದೆಯೇ ಆಲ್ಟ್ ನ್ಯೂಸ್‌ಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ‘ಈತ  ನಮ್ಮ ಮಗ. ನಾವು ಬದುಕಿದ್ದೇವೆ. ನಾವು ಪಾಕಿಸ್ತಾನಿಗಳಾಗಿದ್ದಕ್ಕೆ ಹೆಮ್ಮೆ ಪಡುತ್ತೇವೆ’  ಎಂದಿದ್ದಾರೆ. ಈ ವಿಡಿಯೋವನ್ನು 2015 ರಲ್ಲೇ ಯೂಟ್ಯೂಬ್‌ನಲ್ಲಿ ಅಪ್‌ಲೋಡ್  ಮಾಡಲಾಗಿದ್ದು, 2014 ರಲ್ಲಿ ಪೇಶಾವರ ಆರ್ಮಿ ಶಾಲೆಯ ಮೇಲೆ ಉಗ್ರರು ನಡೆಸಿದ   ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಗೌರವ ಸೂಚಕವಾಗಿ ಗುಲಾಮ್ ಹಾಡು ಅರ್ಪಿಸಿದ ವಿಡಿಯೋ ಇದು. ಇದೇ ವಿಡಿಯೋವನ್ನು ಇದೀಗ ಮೃತ ಭಾರತೀಯ ಮಗ ಎಂದು ಬಿಂಬಿಸಿ ಹರಿಬಿಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!