ಮೀಸಲಾತಿ ರದ್ದಾದರೆ ರಕ್ತ ಕ್ರಾಂತಿ: ಕೇಂದ್ರಕ್ಕೆ ಬಿಜೆಪಿ ಸಂಸದೆ ಎಚ್ಚರಿಕೆ

By Suvarna Web DeskFirst Published Apr 2, 2018, 12:26 PM IST
Highlights

ಮೀಸಲಾತಿಯನ್ನು ತೆಗೆದುಹಾಕಲು ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. 

ಲಕ್ನೋ: ಮೀಸಲಾತಿಯನ್ನು ತೆಗೆದುಹಾಕಲು ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. 

ಕಾನ್ಷೀರಾಮ್ ಸ್ಮತಿ ಉಪವನ್ ಬಳಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ನಡೆಸಿದ 'ಭಾರತೀಯ ಸಂವಿಧಾನ ಔರ್ ಆರಕ್ಷಣ್ ಚಾವೋ 'ರ‍್ಯಾಲಿಯಲ್ಲಿ ಮಾತನಾಡಿದ ಸಂಸದೆ ಸಾವಿತ್ರಿ ಪುಲೆ, ಮೀಸಲಾತಿ ರದ್ದು ಮಾಡುವ ಪಿತೂರಿ ನಡೆಯುತ್ತಿದೆ. ಮೀಸಲಾತಿ ರದ್ದು ಮಾಡಿ, ಸಂವಿಧಾನ ಬದಲಾಯಿಸುವ ಯತ್ನ ನಡೆಯುತ್ತಿದೆ. ಒಂದು ವೇಳೆ ಇದು ನಿಜವಾದಲ್ಲಿ ರಕ್ತಕ್ರಾಂತಿ ನಡೆಯಲಿದೆ ಎಂದು ಎಚ್ಚರಿಸಿದರು.
 

click me!