
ಬೆಂಗಳೂರು (ಮಾ.24): ಫೇಸ್‌ಬುಕ್ ಮಾಹಿತಿ ಸೋರಿಕೆ ಹಗರಣವು ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಳಕೆದಾರರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯೇ ಇಲ್ಲವೇ ಎಂದು ನೀವೇ ತಿಳಿಯಬಹುದೆಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯೇ ಇಲ್ಲವೇ ಎಂಬ ಬಗ್ಗೆ bff ಪದವನ್ನು ಪರಿಚಯಿಸಿದ್ದಾರೆ.
ಫೇಸ್‌ಬುಕ್ ಕಾಮೆಂಟ್ ಬಾಕ್ಸ್‌ನಲ್ಲಿ bff ಎಂದು ಟೈಪ್ ಮಾಡಿದಾಗ ಅದು ಹಸಿರು ಬಣ್ಣಕ್ಕೆ ಬದಲಾದರೆ ನಿಮ್ಮ ಅಕೌಂಟ್ ಸುರಕ್ಷಿತವಾಗಿದೆ ಎಂದರ್ಥ. ಹಾಗೆಯೇ ಅದು ಯಾವುದೇ ಬಣ್ಣಕ್ಕೆ ಬದಲಾಗದಿದ್ದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂದರ್ಥ. ಒಂದು ವೇಳೆ ನೀವು ಬರೆದ ಪದ ಹಸಿರು ಬಣ್ಣಕ್ಕೆ ಪರಿವರ್ತನೆಯಾಗದಿದ್ದಲ್ಲಿ ಕೂಡಲೇ ನಿಮ್ಮ ಪಾಸ್‌ವರ್ಡ್ ಬದಲಿಸಿ’ ಎಂದು ಹೇಳಲಾಗಿದೆ.
ಆದರೆ ನಿಜಕ್ಕೂ ಫೇಸ್‌ಬುಕ್ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಜುಕರ್‌ಬರ್ಗ್ ಈ ಪದ ಪರಿಚಯಿಸಿದ್ದು ನಿಜವೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಫೇಸ್‌ಬುಕ್ 2017ರ ಅಕ್ಟೋಬರ್ 23ರಂದು ಕೆಲ ಪದಗಳಿಗೆ ವಿಶೇಷತೆ ಸೂಚಿಸುವ ನಿಟ್ಟಿನಲ್ಲಿ Congratulations, bff thank you so much ನಂತಹ ಪದಗಳಿಗೆ ಒಂದೊಂದು ಬಣ್ಣವನ್ನು ಪರಿಚಯಿಸಿದೆ. ಅಲ್ಲದೆ ಆ ಪದಗಳ ಮೇಲೆ ಕ್ಲಿಕ್ ಮಾಡಿದಾಗ ಅನಿಮೇಶನ್‌ಗಳು ಕಾಣಿಸುತ್ತವೆ. ಅಂದಹಾಗೆ bff ಎಂದರೆ ‘ಬೆಸ್ಟ್ ಫ್ರೆಂಡ್ ಫಾರೆವರ್’ ಎಂದರ್ಥ. ಈ ಪದಕ್ಕೆ ಫೇಸ್‌ಬುಕ್ ವಿಶೇಷ ಕಲರ್ ಮತ್ತು ಅನಿಮೇಶನ್ ಪರಿಚಯಿಸಿದೆ. ಹಾಗಾಗಿ ಫೇಸ್‌ಬುಕ್ ಕಾಮೆಂಟ್ ಬಾಕ್ಸ್‌ನಲ್ಲಿ ಚ್ಛ್ಛಿ·ಎಂದು ಬರೆದಾಗ ಹಸಿರು ಬಣ್ಣಕ್ಕೆ ಪರಿವರ್ತನೆಯಾಗುತ್ತದೆ. ಇದು ಫೇಸ್‌ಬುಕ್ ಖಾತೆಯ ಸುರಕ್ಷತೆಯ ಸೂಚಕವಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.