
ಮಲಪ್ಪುರಂ(ಮಾ.24): ಮಗಳ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆಯೇ ಮಗಳನ್ನು ಕೊಂದ ದಾರುಣ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಅತಿರಾ (22) ಕೊಲೆಯಾದ ಯುವತಿ. ಈಕೆ ಮದುವೆಯಾಗಬೇಕಿದ್ದ ಹುಡುಗ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಬೇರೆ ಜಾತಿಯವನಾಗಿದ್ದ. ಈ ಕಾರಣಕ್ಕಾಗಿ ಮದುವೆಗೆ ತಂದೆ ವಿರೋಧ ವ್ಯಕ್ತಪಡಿಸಿ ಅನಂತರ ಒಪ್ಪಿಕೊಂಡಿದ್ದು, ಶುಕ್ರವಾರ ವಿವಾಹ ನಿಗದಿಯಾಗಿತ್ತು.
ಆದರೆ ಗುರುವಾರ ಈ ವಿಚಾರವಾಗಿ ತಂದೆ- ಮಗಳ ನಡುವೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ಮಗಳಿಗೆ ತಂದೆ ಹಲವು ಬಾರಿ ಚಾಕುವಿನಲ್ಲಿ ಇರಿದಿದ್ದಾರೆ. ಕುಸಿದು ಬಿದ್ದ ಅತಿರಾಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ವರದಿಯಾಗಿದೆ. ಇದೀಗ ತಂದೆಯನ್ನು ಕೊಲೆ ಆರೋಪದ ಮೇಲೆ ಮಲಪ್ಪುರಂ ಜಿಲ್ಲಾ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.