
ಬೆಂಗಳೂರು (ಮಾ.24): ಕಾಂಗ್ರೆಸ್ಸಿನ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ತಮ್ಮ 25ನೇ ವಯಸ್ಸಿಗೆ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿದವರು.
ಆ ಕಾಲಕ್ಕೆ ಜನತಾದಳದ ಪ್ರಭಾವಿ ನಾಯಕರಾಗಿದ್ದ ಎಚ್.ಡಿ. ದೇವೇಗೌಡರ ಎದುರು ಸ್ಪರ್ಧೆ ಮಾಡಿದ್ದರು. ಹೊಳೆನರಸೀಪುರ ಹಾಗೂ ಕನಕಪುರ ತಾಲೂಕಿನ ಸಾತನೂರು (ಈಗ ಈ ಕ್ಷೇತ್ರ ಅಸ್ತಿತ್ವದಲ್ಲಿ ಇಲ್ಲ) ಎರಡೂ ಕ್ಷೇತ್ರಗಳಿಂದ ದೇವೇಗೌಡರು ಕಣಕ್ಕೆ ಇಳಿದಿದ್ದರು. ಹೊಳೆನರಸೀಪುರದಲ್ಲಿ 3 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಗೌಡರು, ಸಾತನೂರಿನಲ್ಲಿ ಡಿಕೆಶಿ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಅದೊಂದು ಚುನಾವಣೆ ಹೊರತುಪಡಿಸಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಪರಾಭವಗೊಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.