[ವೈರಲ್ ಚೆಕ್] ತಾಜಮಹಲ್‌ನ ಕೆಳಗೆ 22 ರಹಸ್ಯ ಕೋಣೆ; ಅಲ್ಲಿದೆ ಶಿವನ ವಿಗ್ರಹ!

Published : Nov 15, 2017, 01:50 PM ISTUpdated : Apr 11, 2018, 01:05 PM IST
[ವೈರಲ್ ಚೆಕ್] ತಾಜಮಹಲ್‌ನ ಕೆಳಗೆ 22 ರಹಸ್ಯ ಕೋಣೆ; ಅಲ್ಲಿದೆ ಶಿವನ ವಿಗ್ರಹ!

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ತಾಜ್‌ಮಹಲ್‌ನ ನೆಲಮಾಳಿಗೆಯಲ್ಲಿ 22 ಕೋಣೆಗಳು ಇವೆಯಂತೆ.

ವಿಶ್ವದ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಒಂದು ಕಾಲದಲ್ಲಿ ತೇಜೋಮಹಲ್ ಆಗಿತ್ತು ಎಂಬ ವಾದವಿದೆ. ಅದೇ ರೀತಿ ಇದೀಗ ತಾಜ್ ಮಹಲ್ ಶಿವಮಂದಿರವಾಗಿತ್ತು ಎನ್ನುವುದನ್ನು ಸಾಬೀತು ಪಡಿಸುವುದಕ್ಕೆ ಪ್ರಬಲವಾದ ಪುರಾವೆಯೊಂದು ಲಭ್ಯವಾಗಿದೆ. ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿ 22 ರಹಸ್ಯ ಕೋಣೆಗಳಿವೆ. ಒಂದು ವೇಳೆ ಈ ಕೋಣೆಯನ್ನು ತೆರೆದರೆ ಶಿವನ ವಿಗ್ರಹವನ್ನು ಕಾಣಬಹುದು. ಹೀಗಾಗಿ ಈ ಕೋಣೆಗಳನ್ನು ಯಾವತ್ತೂ ಪ್ರವಾಸಿಗರಿಗೆ ತೆರೆಯುವುದೇ ಇಲ್ಲವಂತೆ! ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ತಾಜ್‌ಮಹಲ್‌ನ ನೆಲಮಾಳಿಗೆಯಲ್ಲಿ 22 ಕೋಣೆಗಳು ಇವೆಯಂತೆ. ಒಂದು ವೇಳೆ ಈ ಕೋಣೆಗಳನ್ನು ತೆರೆದರೆ ತಾಜ್ ಮಹಲ್ ಶಿವ ಮಂದಿರ ಆಗಿತ್ತು ಎನ್ನುವುದು ಸಾಬೀತಾಗುತ್ತದೆ. ಇದಕ್ಕೆ ಪೂರಕವಾಗಿ ತಾಜ್‌ಮಹಲ್‌ನ ನೆಲ ಮಾಳಿಗೆಯ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.

ತಾಜ್ ಮಹಲ್‌ನಲ್ಲಿ ಷಹಜಹಾನ್ ಮತ್ತು ಮುಮ್ತಾಜ್’ರ ಗೋರಿ ಇರುವುದು ಕೆಳ ಅಂತಸ್ತಿನಲ್ಲಿ. ಮೇಲಿನ ಅಂತಸ್ತಿನಲ್ಲಿ ಅದರ ಪ್ರತಿರೂಪವನ್ನು ಇರಿಸಲಾಗಿದೆ. ಆದರೆ, ತಾಜ್ ಮಹಲ್‌ನಲ್ಲಿ ಶಿವಮಂದಿರ ಇದೆ ಎಂದು ವಾದಿಸುವ ಪ್ರಕಾರ ಮುಮ್ತಾಜ್‌ಳ ಅಂತ್ಯಕ್ರಿಯೆ ಮಧ್ಯಪ್ರದೇಶದಲ್ಲಿ ಆಗಿದೆಯಂತೆ. ಮುಮ್ತಾಜ್‌ಳ ಅಂತ್ಯಕ್ರಿಯೆ ಆಗ್ರಾದ ಬದಲು ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಆಗಿತ್ತೆ? ಬಳಿಕ ಅದನ್ನು ತಾಜ್‌ಮಹಲ್‌ಗೆ ತರಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.

ಈ ಕುರಿತು ಗೊಂದಲ ನಿವಾರಿಸಲು ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಕೇಳಿದಾಗ ತಿಳಿದು ಬಂದಿದ್ದೇನೆಂದರೆ, ಮುಮ್ತಾಜ್‌ಳ ಗೋರಿಯನ್ನು ಬುರ್ಹಾನ್‌ಪುರದಿಂದ ಆಗ್ರಾಕ್ಕೆ ತಂದಿದ್ದು ನಿಜ. ಆದರೆ, ತಾಜ್ ಮಹಲ್‌ನ ಕೆಳಗಡೆ 22 ಕೋಣೆಗಳಿಲ್ಲ. ತಾಜ್ ಮಹಲ್‌ನ ಕೆಳ ಅಂತಸ್ತನ್ನು ಸುರಕ್ಷತೆಯ ದೃಷ್ಟಿಯಿಂದ ಬಂದ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!