
ಬೆಂಗಳೂರು(ನ.15): ಐತಿಹಾಸಿಕ ಕಥಾ ಹಂದರವಿರುವ ಬಾಲಿವುಡ್'ನ ಬಹು ನಿರೀಕ್ಷಿತ ಪದ್ಮಾವತಿ ಚಿತ್ರಕ್ಕೆ ದೇಶದ ವಿವಿದೆಡೆ ಪ್ರತಿಭಟನೆ ನಡೆಯುತ್ತಿದೆ. ಅದರ ಬಿಸಿ ಈಗ ಕರ್ನಾಟಕಕ್ಕೂ ತಟ್ಟಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುತಾರಾಂಗಣದ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಫೂರ್, ರಣವೀರ್ ಸಿಂಗ್ ಮುಂತಾದವರು ಅಭಿನಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿಯೂ ಪದ್ಮಾವತಿ ಚಿತ್ರ ಬಿಡುಗಡೆ ವಿರೋಧ ವ್ಯಕ್ತಪಡಿಸಲಾಗಿದೆ. ಪದ್ಮಾವತಿ ಬಿಡುಗಡೆಗೆ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು. ರಜಪೂತ್ ಕರ್ಣಿಸೇನಾ ಕರ್ನಾಟಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಟೌನ್ ಹಾಲ್'ನಿಂದ ಆರಂಭಗೊಂಡ ಪ್ರತಿಭಟನೆ ಫ್ರೀಡಂ ಪಾರ್ಕವರೆಗೆ ನಡೆಯಿತು. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರನಷ್ಟೇ , ಪದ್ಮಾವತಿ ಯಾವತ್ತೂ ನೃತ್ಯ ಮಾಡಿರಲಿಲ್ಲ’, ‘ಕರ್ನಾಟಕದಲ್ಲಿ ಪದ್ಮಾವತಿ ರಿಲೀಸ್ ಆಗಲು ಬಿಡಲ್ಲ’ ಎಂದು ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಸಂಘಟನೆ ಹೇಳಿದೆ .
ನಿನ್ನೆಯಷ್ಟೇ ರಾಜಸ್ಥಾನದ ಕೋಟ್ಲಾದಲ್ಲಿ ಪದ್ಮಾವತಿ ಟ್ರೈಲರ್ ಪ್ರದರ್ಶನ ಮಾಡುತ್ತಿದ್ದ ಸಿನಿಮಾ ಮಂದಿರದ ಮೇಲೆ ರಜಪೂತ ಕರ್ಣಿಸೇನಾ ಸಂಘಟನೆಯು ದಾಳಿ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.