[ವೈರಲ್ ಚೆಕ್] ಹಿಂದೂ ಮಹಿಳೆಯನ್ನು  ಅಪಹರಿಸಿ ಅತ್ಯಾಚಾರವೆಸಗಿದರಂತೆ!

Published : Sep 29, 2017, 05:34 PM ISTUpdated : Apr 11, 2018, 01:07 PM IST
[ವೈರಲ್ ಚೆಕ್] ಹಿಂದೂ ಮಹಿಳೆಯನ್ನು  ಅಪಹರಿಸಿ ಅತ್ಯಾಚಾರವೆಸಗಿದರಂತೆ!

ಸಾರಾಂಶ

ರಾಜಸ್ಥಾನದ ಜೋಧ್‌ಪುರದ ಗ್ರಾಮವೊಂದರಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಅಪಹರಣಗೈದ ಇಬ್ಬರು ಮುಸ್ಲಿಂ ವ್ಯಕ್ತಿಗಳು, ಅತ್ಯಾಚಾರವೆಸಗಿದ್ದಾರೆ ಎಂಬ ಟ್ಯಾಗ್‌ಲೈನ್ ಹೊಂದಿದ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ.

ರಾಜಸ್ಥಾನದ ಜೋಧ್‌ಪುರದ ಗ್ರಾಮವೊಂದರಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಅಪಹರಣಗೈದ ಇಬ್ಬರು ಮುಸ್ಲಿಂ ವ್ಯಕ್ತಿಗಳು, ಅತ್ಯಾಚಾರವೆಸಗಿದ್ದಾರೆ ಎಂಬ ಟ್ಯಾಗ್‌ಲೈನ್ ಹೊಂದಿದ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ.

ಕಪ್ಪು ಬಣ್ಣದ ಟಾಪ್ ಮತ್ತು ಗುಲಾಬಿ ಬಣ್ಣದ ಪೈಜಾಮ ಧರಿಸಿದ ಯುವತಿಯನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಬೇಕಾಬಿಟ್ಟಿಯಾಗಿ ಥಳಿಸುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯನ್ನು ಪಾರು ಮಾಡಲು ಮುಂದಾಗುವ ಹಿರಿಯ ವಯಸ್ಸಿನ ಮಹಿಳೆ ಮೇಲೂ ಸಹ ಬಡಿಗೆಯಿಂದ ಹಲ್ಲೆ ಮಾಡುತ್ತಾರೆ. ಬಳಿಕ ಆ ಮಹಿಳೆಯನ್ನು ಟ್ರಾಕ್ಟರ್‌ನಲ್ಲಿ ಹೊತ್ತೊಯ್ಯುವ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ.

ಆದರೆ, ದಿನಕ್ಕೆ ಹತ್ತಾರು ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯಾಗಿ ಸದ್ದು ಮಾಡುವ ಹಿನ್ನೆಲೆಯಲ್ಲಿ ಅನುಮಾನಗೊಂಡು, ತನಿಖೆಗಿಳಿದ ಸಂದರ್ಭದಲ್ಲಿ ವಿಡಿಯೊ ಹಿಂದಿನ ನೈಜ ಕಥೆ ಬಯಲಾಗಿದೆ.

ಅದೇನೆಂದರೆ, ಗುಲಾಬಿ ಬಣ್ಣದ ಪೈಜಾಮ ಧರಿಸಿದ ಮಹಿಳೆಗೆ ಥಳಿಸುವ ವ್ಯಕ್ತಿಯ ಹೆಸರು ಶೌಕತ್ ಆಗಿದ್ದು, ಆತನೇ ಆ ಮಹಿಳೆಯ ಪತಿ. ಕೆಲವು ದಿನಗಳ ಹಿಂದೆ ಪತಿಯ ಜತೆ ಕಿತ್ತಾಡಿಕೊಂಡಿದ್ದ ಯುವತಿ ತವರು ಮನೆಗೆ ಬಂದಿದ್ದಳು. ಮತ್ತೆ ಕರೆದೊಯ್ಯಲು ಬಂದಿದ್ದ ಗಂಡನ ಜತೆ ಹೋಗಲು ಮಹಿಳೆ ನಿರಾಕರಿಸಿದ್ದರು. ಅಲ್ಲದೆ, ಮಹಿಳೆ ತಾಯಿ ಸಹ ಮಗಳನ್ನು ಕಳುಹಿಸಲು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವೇಳೆ ಕ್ರುದ್ಧಗೊಂಡ ಶೌಕತ್ ತನ್ನ ಪತ್ನಿಗೆ ರಸ್ತೆಯಲ್ಲೇ ಥಳಿಸುತ್ತಾನೆ. ಈ ವೇಳೆ ಮಗಳನ್ನು ಬಿಡಿಸಿಕೊಳ್ಳಲು ಮುಂದಾಗುವ ಮಹಿಳೆಗೂ ಹೊಡೆಯುತ್ತಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಹಾಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಕಿಡಿಗೇಡಿಗಳು ಹಿಂದೂ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯ ಕೆಡಿಸುವ ದುರುದ್ದೇಶದಿಂದ ಈ ವಿಡಿಯೊ ಹರಿಬಿಟ್ಟಿರುವುದು ಸಾಬೀತಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1983ರಿಂದಲೂ ಬಸವರಾಜ ಹೊರಟ್ಟಿ, ನಾನು ದೋಸ್ತ್: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಜಮ್ಮುವಿನ ಜೈಲಿನಲ್ಲಿ ಸುರಂಗ ತೋಡಿ ಜೈಲಿನಿಂದ ಪರಾರಿಗೆ ಯತ್ನಿಸಿದ್ದಿ: ಅಜ‌ರ್