ಬಾಲಿವುಡ್ ದಿಗ್ಗಜ ವಿನೋದ್ ಖನ್ನಾ ವಿಧಿವಶ

By Suvarna Web DeskFirst Published Apr 27, 2017, 1:14 AM IST
Highlights

ಸಿನಿಮಾ ಲೆಜೆಂಡ್ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ವಿಧಿವಶರಾದರು. ಹಲವು ದಿನಗಳಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಿನೋದ್ ಖನ್ನಾ ಇಂದು ಬುಧವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.

ಮುಂಬೈ(ಏ. 27): ಸಿನಿಮಾ ಲೆಜೆಂಡ್ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ವಿಧಿವಶರಾದರು. ಹಲವು ದಿನಗಳಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಿನೋದ್ ಖನ್ನಾ ಇಂದು ಬುಧವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ವಿನೋದ್ ಖನ್ನಾ ಅವರು ತಮ್ಮ ಪತ್ನಿ ಕವಿತಾ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈಗಿರುವ ಪಾಕಿಸ್ತಾನದ ಪೇಶಾವರದಲ್ಲಿ 1946ರ ಅಕ್ಟೋಬರ್ 6ರಂದು ಪಂಜಾಬೀ ಕುಟುಂಬದಲ್ಲಿ ಜನಿಸಿದ ವಿನೋದ್ ಖನ್ನಾ ಅವರು ಓದಿ ಬೆಳೆದದ್ದೆಲ್ಲಾ ಮುಂಬೈ, ದೆಹಲಿ ಮತ್ತು ನಾಶಿಕ್'ನಲ್ಲಿ. 1968ರಲ್ಲಿ ಬಾಲಿವುಡ್'ಗೆ ಪದಾರ್ಪಣೆ ಮಾಡಿದ ವಿನೋದ್ ಖನ್ನಾ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕೀಯ:
1997ರಲ್ಲಿ ಬಿಜೆಪಿ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ವಿನೋದ್ ಖನ್ನಾ 1999ರಲ್ಲಿ ಪಂಜಾಬ್'ನ ಗುರುದಾಸ್'ಪುರ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ವಾಜಪೇಯಿ ಸರಕಾರದಲ್ಲಿ ಕೇಂದ್ರ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದರು. 2014ರ ಲೋಕಸಭೆ ಚುನಾವಣೆಯಲ್ಲೂ ಅವರು ಗುರುದಾಸ್'ಪುರ ಕ್ಷೇತ್ರದಿಂದ ಗೆದ್ದಿದ್ದರು.

ವೈಯಕ್ತಿಕ ಜೀವನ:
ವಿನೋದ್ ಖನ್ನಾ 1971ರಲ್ಲಿ ಗೀತಾಂಜಲಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ರಾಹುಲ್ ಖನ್ನಾ ಮತ್ತು ಅಕ್ಷಯ್ ಖನ್ನಾ ಜನಿಸಿದ್ದಾರೆ. ಮದುವೆಯಾದ ಕೆಲ ವರ್ಷಗಳಲ್ಲೇ ಇವರು ಓಶೋ ಅವರ ಅನುಯಾಯಿಯಾದ ನಂತರ ಸಂಸಾರದಲ್ಲಿ ಬಿರುಕು ಮೂಡಿ ದಾಂಪತ್ಯ ಮುರಿದುಬಿದ್ದಿತು. ಗೀತಾಂಜಲಿಗೆ ವಿಚ್ಛೇದನ ಕೊಟ್ಟು 1990ರಲ್ಲಿ ಕವಿತಾರನ್ನು ಮದುವೆಯಾದರು. ಈ ದಂಪತಿಗೆ ಸಾಕ್ಷಿ ಮತ್ತು ಶ್ರದ್ಧಾ ಎಂಬಿಬ್ಬರು ಮಕ್ಕಳಿದ್ದಾರೆ.

click me!