ಕೇರಳ ಸರ್ಕಾರದಿಂದ ಸೇಡಿನ ಕ್ರಮ: ಸಂಸದ ರಾಜೀವ್ ಚಂದ್ರಶೇಖರ್

By Suvarna Web DeskFirst Published Nov 25, 2017, 5:11 PM IST
Highlights

ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತವಾದ್ದದ್ದು. ಕೇರಳ ಸರ್ಕಾರ ಸೇಡಿನ ಕ್ರಮ ಕೈಗೊಳ್ಳುತ್ತಿದೆ. ಕಮ್ಯುನಿಸ್ಟ್ ಸರ್ಕಾರದಿಂದ ದುರುದ್ದೇಶದ ಪ್ರಕರಣ ದಾಖಲಿಸಲಾಗಿದೆ, ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ನವದೆಹಲಿ:  ಕೇರಳದಲ್ಲಿ  ರೆಸಾರ್ಟ್​ಗಾಗಿ ಕೆರೆ ಒತ್ತುವರಿ ಆರೋಪದ ಕುರಿತು  ರಾಜ್ಯ ಸಭೆ ಸದಸ್ಯ ರಾಜೀವ್​ ಚಂದ್ರಶೇಖರ್​ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತವಾದ್ದದ್ದು. ಕೇರಳ ಸರ್ಕಾರ ಸೇಡಿನ ಕ್ರಮ ಕೈಗೊಳ್ಳುತ್ತಿದೆ. ಕಮ್ಯುನಿಸ್ಟ್ ಸರ್ಕಾರದಿಂದ ದುರುದ್ದೇಶದ ಪ್ರಕರಣ ದಾಖಲಿಸಲಾಗಿದೆ, ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Latest Videos

‘ನನ್ನ ಒಡೆತನದ ಮಾಧ್ಯಮ ಸಂಸ್ಥೆಗಳಿಂದ ಕೇರಳ ಸರ್ಕಾರದ ಅಕ್ರಮ ಬಯಲಿಗೆಳೆಯಲಾಗಿದೆ. ನಮ್ಮ ತನಿಖಾ ವರದಿಗಳಿಂದ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವ ಥಾಮಸ್ ಚಾಂಡಿ ಭೂ ಒತ್ತುವರಿ  ಕುರಿತು ವಿಸ್ತೃತ ವರದಿ ಪ್ರಸಾರವಾಗಿತ್ತು. ಕೇರಳದ ಏಷಿಯಾನೆಟ್ ನ್ಯೂಸ್​ ಚಾನೆಲ್ ವರದಿಯಿಂದ ಸಚಿವ ಚಾಂಡಿ ರಾಜೀನಾಮೆ ನೀಡಬೇಕಾಯಿತು. ಇದಕ್ಕೆ ರೊಚ್ಚಿಗೆದ್ದು ಕಮ್ಯುನಿಸ್ಟರು ರೆಸಾರ್ಟ್​ ಮೇಲೆ ದಾಳಿ ನಡೆಸಿದರು. ಅದನ್ನು ಪ್ರಶ್ನಿಸಿದ್ದರಿಂದ ಸರ್ಕಾರ ಒತ್ತುವರಿ ಆರೋಪ ಮಾಡುತ್ತಿದೆ, ಎಂದು ಅವರು ಹೇಳಿದ್ದಾರೆ.

‘ನಿರಾಮಯ’ ರೆಸಾರ್ಟ್​ನಿಂದ ಭೂ ಒತ್ತುವರಿಯಾಗಿಲ್ಲ’

‘ಕೇವಲ 6 ಸೆಂಟ್​ ಜಾಗ ಒತ್ತುವರಿಯಾಗಿದೆ ಎಂದು ಗ್ರಾಮ ಪಂಚಾಯತ್ ಹೇಳಿದೆ.  ಈ ಕುರಿತ ಯಾವುದೇ ತನಿಖೆಗೆ ನಾವು ಸಿದ್ಧ ಎಂದು ರಾಜೀವ್​ ಚಂದ್ರಶೇಖರ್​ ತಿಳಿಸಿದ್ದಾರೆ.

ಡಿವೈಎಫ್​ಐನಿಂದ ರೆಸಾರ್ಟ್​ ಮೇಲಿನ ದಾಳಿ ಖಂಡನೀಯ. ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಬಂದು ಹೋರಾಡಲಿ. ಕಮ್ಯುನಿಸ್ಟ್​ ಆಡಳಿತದ ಗ್ರಾಮ ಪಂಚಾಯಿತಿಯಿಂದ ನೋಟಿಸ್​ ನೀಡಲಾಗಿದೆ. ಭೂ ಒತ್ತುವರಿ ವಿರುದ್ಧ ನನ್ನ ಹೋರಾಟ ನಿಲುವುದಿಲ್ಲ ಎಂದು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್​ ಸ್ಪಷ್ಟಪಡಿಸಿದ್ದಾರೆ.

click me!