
ನವದೆಹಲಿ(ನ.25): ಹಠಾತ್ ವಿಚ್ಛೇದನ ನೀಡಲು ಮುಸಲ್ಮಾನರು ಬಳಸುತ್ತಿದ್ದ ತ್ರಿವಳಿ ತಲಾಖ್ (ತಲಾಖ್ ಎ ಬಿದ್ದತ್)ಗೆ ನಿಷೇಧ ಹೇರಿದ ಸುಪ್ರೀಂಕೋರ್ಟ್ ಇದೀಗ ಪಾರ್ಸಿ ಸಮುದಾಯದಲ್ಲಿರುವ ವಿಚ್ಛೇದನ ಪದ್ಧತಿ ಬಗ್ಗೆ ದೃಷ್ಟಿ ಹರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳ ಸಲಹೆ ಕೋರಿದೆ. ಕೆಲವು ಸದಸ್ಯರನ್ನು ಒಳಗೊಂಡ ನ್ಯಾಯ ಮಂಡಳಿ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆ 1959ರಲ್ಲೇ ಭಾರತದಲ್ಲಿ ರದ್ದಾಗಿದೆ.
ಆದರೆ ದೇಶದ ಪ್ರಭಾವಿ ಪಾರ್ಸಿ ಸಮುದಾಯದಲ್ಲಿ ಈಗಲೂ ಪಂಚ ಸದಸ್ಯ ನ್ಯಾಯಮಂಡಳಿ ಮೂಲಕ ವಿಚ್ಛೇದನಗಳು ಪ್ರಕರಣಗಳು ವಿಚಾರಣೆ ನಡೆಯುತ್ತಿವೆ. ಈ ವಿಚಾರ ತಿಳಿದು ನ್ಯಾ| ಕುರಿಯನ್ ಜೋಸೆಫ್ ನೇತೃತ್ವದ ಪೀಠ ಅಚ್ಚರಿ ವ್ಯಕ್ತಪಡಿಸಿತು. ಇದಕ್ಕೆ ಅರ್ಜಿದಾರೆ, ತ್ರಿವಳಿ ತಲಾಖ್ ಅನ್ನೇ ಸುಪ್ರೀಂ ಸಂವಿಧಾನ ಬಾಹಿರ ಎಂದಿದೆ. ಹೀಗಾಗಿ ಈ ಕಾನೂನನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೋರಿದರು. ನ್ಯಾಯಪೀಠ ಒಪ್ಪಿಗೆ ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.