ಮೊದಲ ಬಾರಿಗೆ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿಗೆ ಪಲ್ಲಕ್ಕಿ ಮೆರವಣಿಗೆ!

By Web DeskFirst Published Aug 28, 2019, 9:02 AM IST
Highlights

ಮೊದಲ ಬಾರಿಗೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಂದದ್ದಕ್ಕೆ ಪಲ್ಲಕ್ಕಿಯಲ್ಲಿ ಮೆರವಣಿಗೆ!| ಸಿಯಾಹಾ ಜಿಲ್ಲಾಧಿಕಾರಿ ಭೂಪೇಂದ್ರ ಚೌಧರಿ,

ಗುವಾಹಟಿ[ಆ.28]: ಮೊತ್ತ ಮೊದಲ ಬಾರಿಗೆ ತಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿಯೊಬ್ಬರ ಆಗಮನ ಕಂಡು ಸಂಭ್ರಮಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿಯನ್ನು ಪಲ್ಲಕ್ಕಿ ಮೇಲೆ ಕೂರಿಸಿ ಅದ್ಧೂರಿ ಸ್ವಾಗತ ಕೋರಿದ್ದೂ, ಅಲ್ಲದೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಅಚ್ಚರಿಯ ಘಟನೆಯ ಮಿಜೋರಾಂನ ಕುಗ್ರಾಮ ತಿಸೋಪಿ ಎಂಬಲ್ಲಿ ನಡೆಸಿದೆ.

Exhilarating trek to village in culminating in an overwhelming welcome 🙏 pic.twitter.com/JYEpf7No0l

— Bhupesh Chaudhary (@bhupesh_ch)

ತಿಸೋಪಿ ತಲುಪಲು ದಟ್ಟಕಾಡಿನಲ್ಲಿ ಸುಮಾರು 15 ಕಿ.ಮೀ ನಡೆದುಕೊಂಡೇ ಬರಬೇಕು. ಇದರ ಹೊರತಾಗಿಯೂ ಗ್ರಾಮದ ರಸ್ತೆ ಕಾಮಗಾರಿ ವೀಕ್ಷಿಸಲು ಸಿಯಾಹಾ ಜಿಲ್ಲಾಧಿಕಾರಿ ಭೂಪೇಂದ್ರ ಚೌಧರಿ, ಇತರೆ ಕೆಲ ಅಧಿಕಾರಿಗಳ ಜೊತೆಗೆ 15 ಕಿ.ಮೀ ನಡೆದುಕೊಂಡೇ ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದರು.

Trekked 15 kms on foot to reach the beautiful and remote village in district to realise the difficulty the people face everyday. Completely overwhelmed by the warm reception given by the people of pic.twitter.com/9tBLFah2gp

— Bhupesh Chaudhary (@bhupesh_ch)

ಇದರಿಂದ ಹರ್ಷಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸ್ವಾಗತಿಸಿದ್ದಾರೆ.

click me!