ಕೇರಳದ ಈ ಹಳ್ಳಿಯಲ್ಲಿ 400 ಜೋಡಿ ಅವಳಿ ಮಕ್ಕಳು: ದೇಶದ ಯಾವ ಊರಿನಲ್ಲೂ ಇಲ್ಲ ಇಷ್ಟೊಂದು ‘ಟ್ವಿನ್ಸ್'

By Suvarna Web DeskFirst Published Apr 28, 2017, 1:45 AM IST
Highlights

ಒಂದು ಹಳ್ಳಿಯಲ್ಲಿ ಅವಳಿ ಮಕ್ಕಳು ಹೆಚ್ಚೆಂದರೆ ಎಷ್ಟುಇರಬಹುದು? ಒಂದು, ಎರಡು, ಕೊನೆಗೆ ಹತ್ತು ಎಂಬುದು ನಿಮ್ಮ ಊಹೆಯಾದರೆ ತಪ್ಪು. ಕೇರಳದ ಹಳ್ಳಿಯೊಂದರಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇವೆ!

ಮಲಪ್ಪುರಂ(ಎ.28): ಒಂದು ಹಳ್ಳಿಯಲ್ಲಿ ಅವಳಿ ಮಕ್ಕಳು ಹೆಚ್ಚೆಂದರೆ ಎಷ್ಟುಇರಬಹುದು? ಒಂದು, ಎರಡು, ಕೊನೆಗೆ ಹತ್ತು ಎಂಬುದು ನಿಮ್ಮ ಊಹೆಯಾದರೆ ತಪ್ಪು. ಕೇರಳದ ಹಳ್ಳಿಯೊಂದರಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇವೆ!

ನಂಬಲು ಕಷ್ಟವಾದರೂ ಇದು ನಿಜ. ರಾಷ್ಟ್ರೀಯ ಸರಾಸರಿ ಪ್ರಕಾರ ಪ್ರತಿ 1000 ಹೆರಿಗೆಯಲ್ಲಿ 9 ಅವಳಿ ಮಕ್ಕಳು ಜನಿಸಬೇಕು. ಆದರೆ ಕೇರಳದ ಹಳ್ಳಿ ಕೊಡಿನ್ಹಿಯಲ್ಲಿ ಈ ಸರಾಸರಿ 45ರಷ್ಟಿದೆ. ಹೀಗಾಗಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಅವಳಿಗಳು ಇಲ್ಲಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳು ಕೊಡಿನ್ಹಿಯಲ್ಲಿ ಹುಟ್ಟುತ್ತಿರುವುದೇಕೆ ಎಂಬುದು ಸಂಶೋಧಕರಿಗೂ ಪ್ರಶ್ನಾರ್ಥಕವಾಗಿದೆ. ಹೀಗಾಗಿ ಹೈದರಾಬಾದ್‌ನ ಕೇಂದ್ರೀಯ ಜೀವಕೋಶ ಹಾಗೂ ಜೀವಕಣ ಪ್ರಯೋಗಾ ಲಯ, ಕೇರಳದ ಮೀನುಗಾರಿಕೆ ಹಾಗೂ ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಲಂಡನ್‌ ಮತ್ತು ಜರ್ಮನ್‌ ವಿವಿಗಳ ಸಂಶೋಧಕರನ್ನು ಒಳಗೊಂಡ ಒಂದು ತಂಡ ಕಳೆದ ಅಕ್ಟೋಬರ್‌ನಲ್ಲಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿ ಅವಳಿ ಮಕ್ಕಳ ಜೊಲ್ಲುರಸ ಹಾಗೂ ಕೂದಲಿನ ಮಾದರಿ ಸಂಗ್ರಹಿಸಿ ಡಿಎನ್‌ಎ ಅಧ್ಯಯನದಲ್ಲಿ ತೊಡಗಿದೆ.

ಕೊಡಿನ್ಹಿಯಲ್ಲಿ ಅವಳಿ ಮಕ್ಕಳ ಪ್ರಮಾಣ ಹೆಚ್ಚಿರುವುದಕ್ಕೆ ನಿಖರ ಕಾರಣ ಗೊತ್ತಿಲ್ಲದೇ ಇದ್ದರೂ ಹಲವಾರು ವದಂತಿಗಳಂತೂ ಇವೆ. ಇದು ವಂಶವಾಹಿ ಸಮಸ್ಯೆ ಎಂದು ಕೆಲವರು, ಊರಿನ ನೀರು ಅಥವಾ ಗಾಳಿಯಲ್ಲಿರುವ ಯಾವುದೋ ಅಂಶದಿಂದ ಈ ಸಮಸ್ಯೆ ಕಾಡುತ್ತಿದೆ ಎಂದು ಮತ್ತೆ ಕೆಲವರು ಹೇಳುತ್ತಾರೆ. ‘ಅವಳಿ ಮಕ್ಕಳು ಹಾಗೂ ಬಂಧುಗಳ ಬಳಗ' ಎಂಬ ಸಂಘವೂ ಈ ಊರಿನಲ್ಲಿ ಇದೆ. 2008ರಲ್ಲಿ ಈ ಊರಿನಲ್ಲಿ ಅವಳಿಗಳ ಸಂಖ್ಯೆ 280 ಜೊತೆ ಇತ್ತು. ಈಗ ಏರಿಕೆಯಾಗಿ, 400 ತಲುಪಿದೆ.

ಶಾಲಾ ಮಕ್ಕಳಿಂದ ಗೊತ್ತಾಯ್ತು:

ಕೊಡಿನ್ಹಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಳಿ ಮಕ್ಕಳ ಜನನವಾಗುತ್ತಿರುವುದು ಮೊದಲು ಗ್ರಾಮಸ್ಥರಿಗೂ ಗೊತ್ತಿರಲಿಲ್ಲ. ಅದನ್ನು ಪತ್ತೆ ಹಚ್ಚಿದ್ದು ಅವಳಿ ಸೋದರಿಯರು. ಸಮೀರಾ ಹಾಗೂ ಫಮೀನಾ ಎಂಬ ಬಾಲಕಿಯರು 8ನೇ ತರಗತಿಗೆ ಸೇರಿದಾಗ, ತಮ್ಮ ತರಗತಿಯಲ್ಲೇ 8 ಅವಳಿಗಳಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ಬಳಿಕ ಇತರ ತರಗತಿ ಯಲ್ಲೂ ಅವಳಿಗಳು ಕಂಡುಬಂದರು. ಸಣ್ಣದೊಂದು ಸಮೀಕ್ಷೆಯನ್ನು ಈ ಸೋದರಿಯರು ನಡೆಸಿದಾಗ ಶಾಲೆಯಲ್ಲಿ 24 ಅವಳಿಗಳು ಪತ್ತೆಯಾಗಿದ್ದವು. ಬಳಿಕ ಈ ಸುದ್ದಿ ಊರಿಗೆ ಹರಡಿತು

click me!