ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ವಿಕಾಸ್ ಸ್ವರೂಪ್

By Web DeskFirst Published Jul 12, 2019, 3:27 PM IST
Highlights

ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ವಿಕಾಸ್ ಸ್ವರೂಪ್ ನೇಮಕ| ವಿಕಾಸ್ ಸ್ವರೂಪ್ ಆಯ್ಕೆ ಅಂತಿಮಗೊಳಿಸಿದ ಸಚಿವ ಸಂಪುಟ ಸಮಿತಿ| ಆಗಸ್ಟ್ 1 ರಿಂದ ಅಧಿಕಾರವಹಿಸಿಕೊಳ್ಳಲಿರುವ ವಿಕಾಸ್| 1986ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ|

ನವದೆಹಲಿ(ಜು.12): ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ವಿಕಾಸ್ ಸ್ವರೂಪ್ ಅವರ ನೇಮಕಕ್ಕೆ ಸಚಿವ ಸಂಪುಟ ಸಮಿತಿ ಅನುಮತಿ ನೀಡಿದ್ದು, ವಿಕಾಸ್ ಇದೇ ಆಗಸ್ಟ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Vikas Swarup has been appointed as Secretary (CPV & OIA) in the Ministry of External Affairs. (file pic) pic.twitter.com/HEkcXfqTeS

— ANI (@ANI)

ಪ್ರಸಕ್ತ ಒಟ್ಟಾವಾದಲ್ಲಿ ಭಾರತೀಯ ಹೈಕಮಿಷನರ್ ಆಗಿ ಕಾರ್ಯನಿರ್ಹಿಸುತ್ತಿರುವ ವಿಕಾಸ್ ಸ್ವರೂಪ್, 1986ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದಾರೆ.

click me!