
ವಾಷಿಂಗ್ಟನ್(ಜು.12): ಮಿಲಿಯನ್ ಡಾಲರ್ ಮೊತ್ತದ ಸಾವಿರಾರು ಪೌಂಡ್ ಕೊಕೇನ್ ಸಾಗಿಸುತ್ತಿದ್ದ ಸಬ್ ಮರೀನ್’ನ್ನು ಅಮೆರಿಕದ ಕೋಸ್ಟ್ ಗಾರ್ಡ್’ಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲಂಬಿಯಾದಿಂದ ಖಾಸಗಿ ಸಬ್ ಮರೀನ್’ನಲ್ಲಿ ಕೊಕೇನ್ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು, ಕೋಲಂಬಿಯಾ -ಇಕ್ವೆಡಾರ್ ಗಡಿ ಬಳಿ ಸಬ್ ಮರೀನ್ ಮೇಲೆ ದಾಳಿ ಮಾಡಿ ಕೊಕೇನ್ ವಶಕ್ಕೆ ಪಡೆದಿದ್ದಾರೆ.
ಕೊಲಂಬಿಯಾದ ಡ್ರಗ್ ಡೀಲರ್’ಗಳು ಮಾದಕ ವಸ್ತುಗಳನ್ನು ಅಮೆರಿಕಕ್ಕೆ ರವಾನೆ ಮಾಡಲು ಸಬ್ ಮರೀನ್ ಮೊರೆ ಹೋಗಿದ್ದು, ಇವುಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ.
ಸದ್ಯ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿರುವ ಸಬ್ ಮರೀನ್’ನಿಂದ 232 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ 17 ಸಾವಿರ ಪೌಂಡ್ ಕೊಕೇನ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಮೆರಿಕ ಸಮಾಜವನ್ನು ಕಾಡುತ್ತಿರುವ ಅನಿಷ್ಠಗಳಲ್ಲಿ ಮಾದಕ ವಸ್ತು ಸೇವನೆ ಮತ್ತು ಕಳ್ಳಸಾಗಾಣೆ ಅತ್ಯಂತ ಪ್ರಮುಖವಾದದ್ದು. 1980-90 ರ ದಶಕದಲ್ಲಿ ಕೊಲಂಬಿಯಾ, ಮೆಕ್ಸಿಕೋದ ಅತ್ಯಂತ ಕುಖ್ಯಾತ ಡ್ರಗ್ ಡೀಲರ್‌ಗಳಾಗಿದ್ದ ಪಾಬ್ಲೋ ಎಸ್ಕೋಬಾರ್, ಎಲ್ ಚಾಪೋ ಅಮೆರಿಕದ ನಿದ್ದೆಗೆಡೆಸಿದ್ದರು.
ತೀರ ಇತ್ತೀಚಿಗೆ ಹದಿಹರೆಯದ ಗರ್ಭಧಾರಣೆ ಸಮಸ್ಯೆ ಅಮೆರಿಕವನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.