ಹಣ ಪಡೆದು ಧರ್ಮರಾಜ್'ನನ್ನು ಎನ್'ಕೌಂಟರ್' ಮಾಡಿದರೆ ? ಆರೋಪ ಸುಳ್ಳು ಎಂದ ಸಾಹುಕಾರ್

Published : Oct 30, 2017, 05:27 PM ISTUpdated : Apr 11, 2018, 12:46 PM IST
ಹಣ ಪಡೆದು ಧರ್ಮರಾಜ್'ನನ್ನು ಎನ್'ಕೌಂಟರ್' ಮಾಡಿದರೆ ? ಆರೋಪ ಸುಳ್ಳು ಎಂದ ಸಾಹುಕಾರ್

ಸಾರಾಂಶ

ಧರ್ಮರಾಜ್ ತಾಯಿ ವಿಮಲ ಅವರು ಕೂಡ ಪೊಲೀಸರು ಮಹಾದೇವ್ ಅವರಿಂದ ದುಡ್ಡು ಪಡೆದು ನನ್ನ ಮಗನನ್ನು ಹತ್ಯೆ ಮಾಡಿದ್ದಾರೆ'ಎಂದು ಆರೋಪ ಮಾಡಿದ್ದಾರೆ.

ವಿಜಯಪುರ(ಅ.30): ಭೀಮ ತೀರದಲ್ಲಿ ಇಂದು ಪೊಲೀಸ್ ಫೈರಿಂಗ್'ನಲ್ಲಿ ಹತನಾದ ಹಂತಕ ಧರ್ಮರಾಜ್' ಎನ್'ಕೌಂಟರ್'ಗೆ ಪೊಲೀಸರು ಸುಪಾರಿ ಪಡೆದರೆಂಬ ಆರೋಪ ಕೇಳಿಬರುತ್ತಿದೆ.

ಹಂತಕ ಪುತ್ರಪ್ಪ ಸಾಹುಕಾರ್ ಹಾಗೂ ಫಯಾಜ್ ಮುಷರಫ್ ಕೊಲೆಯಲ್ಲಿ ಆರೋಪಿಯಾಗಿದ್ದು, ಕೆಲ ದಿನಗಳ ಹಿಂದೆ ಜಾಮೀನಿನ ಮೇರೆಗೆ ಹೊರ ಬಂದಿದ್ದ. ಈತನನ್ನು ಮಹಾದೇವ್ ಸಾಹುಕಾರ್ ಪೊಲೀಸರಿಗೆ ಹಣ ನೀಡಿ ಹತ್ಯೆ ಮಾಡಿಸಿರುವುದಾಗಿ ಆರೋಪ ಕೇಳಿಬಂದಿದೆ.

ತನ್ನ ಅಣ್ಣನ ಹತ್ಯೆಗೆ ಪ್ರತಿಕಾರವಾಗಿ ಮಹಾದೇವ್ ಸಾಹುಕಾರ್ ಪೊಲೀಸರಿಗೆ 5 ಕೋಟಿ ರೂ. ನೀಡಿದ್ದು, ಇತ್ತೀಚಿಗಷ್ಟೆ ವರ್ಗಾವಣೆಯಾಗಿದ್ದ ಪೊಲೀಸರು ಎನ್'ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ಧರ್ಮರಾಜ್ ತಾಯಿ ವಿಮಲ ಅವರು ಕೂಡ ಪೊಲೀಸರು ಮಹಾದೇವ್ ಅವರಿಂದ ದುಡ್ಡು ಪಡೆದು ನನ್ನ ಮಗನನ್ನು ಹತ್ಯೆ ಮಾಡಿದ್ದಾರೆ'ಎಂದು ಆರೋಪ ಮಾಡಿದ್ದಾರೆ. ಧರ್ಮರಾಜ್' ದೇಹಕ್ಕೆ 8 ಗುಂಡು ಹೊಕ್ಕಿದ್ದು ಅದರಲ್ಲಿ ಕೇವಲ 2 ಗುಂಡು ಮಾತ್ರ ಸರ್ವೀಸ್ ರಿವಾಲ್ವಾರ್'ನಿಂದ ಸಿಡಿದಿವೆ. ಇದು ಆರೋಪಕ್ಕೆ ಮತ್ತಷ್ಟು ಪುರಾವೆ ನೀಡಿದಂತಾಗಿದೆ.

ಆರೋಪ ನಿರಾಕರಿಸದ ಸಾಹುಕಾರ್ ಮಹಾದೇವ್

ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ ಮಹಾದೇವ್ ಸಾಹುಕಾರ್' ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ಈ ರೀತಿ ಮಾಡುವವನಲ್ಲ. ಧರ್ಮ'ರಾಜ್'ಗೂ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ. ನನ್ನ ಇಬ್ಬರು ಅಣ್ಣಂದಿರು ಕೊಲೆಯಾಗಿದ್ದಾರೆ. ಈ ಕಾರಣದಿಂದ ನಾನು ಗನ್ ಮ್ಯಾನ್'ಗಳನ್ನು ಇಟ್ಟುಕೊಂಡಿದ್ದೇನೆ. ನನ್ನ ಮನೆ ದೇವರಾಣೆಗೂ ನಾನು ಹಣ ನೀಡಿ ಹತ್ಯೆ ಮಾಡಿಸಿಲ್ಲ'. ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ