
ಬಾಗಲಕೋಟೆ(ಆ.13): ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ನಾಟಕೀಯ ಬೆಳವಣಿಗೆ ಎಂಬಂತೆ ಆಸ್ಪತ್ರೆಯಿಂದ ದಿಢೀರ್ ಕಾಲ್ಕಿತ್ತಿದ್ದಾರೆ.
ಇಂದು ಬೆಳಿಗ್ಗೆ ನಿದ್ರೆ ಮಾತ್ರೆ ನುಂಗಿ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಜಿಲ್ಲಾ ಆಸ್ಪತ್ರೆ ವೈದ್ಯರು ಸಂತ್ರಸ್ತೆಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದರು. ಆದರೆ ಚಿಕಿತ್ಸೆ ನೀಡಿದ್ದ ವೈದ್ಯರು ಮೂರು ದಿನಗಳ ಕಾಲ ವಿಜಯಲಕ್ಷ್ಮಿ'ಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಚಿಕಿತ್ಸೆಯಿಂದ ಗುಣಮುಖ ರಾದ ವಿಜಯಲಕ್ಷ್ಮಿ ನನಗೆ ಮೇಟಿ ಬೆಂಬಲಿಗರಿಂದ ಜೀವ ಬೆದರಿಕೆ ಇದೆ ಎಂದು ಹೇಳಿಕೆ ಕೊಟ್ಟಿದ್ದರು. ತದನಂತರ 6 ಗಂಟೆಯ ಸುಮಾರಿಗೆ ಉಲ್ಟಾ ಹೊಡೆದ ವಿಜಯಲಕ್ಷ್ಮಿ ನನಗೆ ಯಾರಿಂದಲೂ ಜೀವಬೆದರಿಕೆ ಇಲ್ಲ. ನಮ್ಮ ಮನೆಯ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳುತ್ತೇವೆಂಬ ಜಾರಿಕೆಯ ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆಸ್ಪತ್ರೆಯ ವೈದ್ಯರ ಸಲಹೆ ಮೀರಿ ಆಸ್ಪತ್ರೆಯಿಂದ ದಿಢೀರ್ ಹೊರ ನಡೆಯುವ ಮೂಲಕ ಮತ್ತೊಂದು ಸಂಶಯಕ್ಕೆ ಕಾರಣರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.