
ಮಂಡ್ಯ(ಆ.13): ರಾಜ್ಯಕ್ಕೆ 3 ದಿನಗಳ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಅಲೆಯಬ್ಬಿಸಲು ಪ್ಲ್ಯಾನ್ ಮಾಡುತ್ತಿದ್ದಾರೆಯೇ ? ಅಂತಹ ಕೆಲವು ಅನುಮಾನಗಳು ಗೋಚರಿಸುತ್ತಿವೆ.
ರಾಜ್ಯದ ಪ್ರಬಲ ಸಮುದಾಯವಾದವಾದ ಒಕ್ಕಲಿಗ ಹಾಗೂ ಅದೇ ಸಮುದಾಯದ ಮಠಾಧೀಶರಾದ ಶ್ರೀ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಾಲಾನಂದ ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ಸೆಳೆಯಲು ಬಿಜೆಪಿಯ ರಾಜಕೀಯ ಚಾಣಾಕ್ಯ ಎಂದು ಕರೆಸಿಕೊಳ್ಳುವ ಷಾ ಯೋಜನೆ ರೂಪಿಸುತ್ತಿದ್ದಾರೆಯೇ ಎಂಬ ಮಾತುಗಳು ಹಲವು ದಿನಗಳಿಂದಲೂ ಕೇಳಿ ಬಂದಿವೆ. ಇಂದು ಅಮಿತ್ ಷಾ ಅವರು ಚುಂಚನಗಿರಿ ಕ್ಷೇತ್ರಕ್ಕೆ ಭೀಟಿ ನೀಡಿದ್ದು ಈ ಅನುಮಾನವನ್ನು ಇನ್ನಷ್ಟು ಗಟ್ಟಿ ಮಾಡಿತ್ತು. ಆದರೆ ಈ ಯೋಜನೆಯನ್ನು ಸ್ವತಃ ಸ್ವಾಮೀಜಿ ಅವರೆ ಬಹಿರಂಗವಾಗಿ ನಿರಾಕರಿಸಿದ್ದಾರೆ.
ಷಾ ಅವರು ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡುವ ಸಮಾರಂಭಕ್ಕಾಗಿ ಶ್ರೀ ಕ್ಷೇತ್ರ ಚುಂಚನಗಿರಿಗೆ ಭೇಟಿ ನೀಡಿದ್ದರು. ಅಲ್ಲದೆ ಈ ಸಮಾರಂಭದಲ್ಲಿಯೇ ಉತ್ತರ ಪ್ರದೇಶದಲ್ಲಿ ಸನ್ಯಾಸಿಯಾಗಿದ್ದ ಯೋಗಿ ಆದಿತ್ಯ ಲನಾಥ ನನ್ನು ಸಿ.ಎಂ.ಮಾಡಿ ಚಾಣಾಕ್ಷ ತಂತ್ರಗಾರಿಕೆ ಮೆರೆದಿದ್ದ ನಿರ್ಮಾಲಾನಂದ ಅವರನ್ನು ರಾಜಕೀಯಕ್ಕೆ ಸೆಳೆಯುವ ತಂತ್ರ ಅಡಗಿತ್ತು ಸಹಜವಾಗೇ ಕೇಳಿ ಬಂದಿತ್ತು.
ವೇದಿಕೆಯಲ್ಲಿಯೇ ನಿರಾಕರಣೆ
ಆದರೆ ರಾಜಕೀಯ ಆಗಮನವನ್ನು ನಿರ್ಮಾಲಾನಂದ ಶ್ರೀಗಳು ಬಹಿರಂಗವಾಗಿ ನಿರಾಕರಿಸಿದರು. ಭಾಷಣದ ವೇಳೆ ಮಾತನಾಡಿದ ಅವರು 'ಉತ್ತರ ಭಾರತದಲ್ಲಿ ಮಠಗಳು ಅಷ್ಟಧರ್ಮ ಸೇವೆಯ ಜೊತೆ ರಾಜಕೀಯ ಸೇವೆ ಮಾಡ್ತಿವೆ. ಇದಕ್ಕೆ ತಾವು ಎಂದು ಸಿದ್ದರಿಲ್ಲ. ನಾವು ರಾಜಕೀಯ ಮಾಡುವವರಿಂದಲೇ ಸರಿಯಾದ ರೀತಿ ರಾಜಕೀಯ ಮಾಡಿಸ್ತೀವೆ ಎಂದು ಹೇಳುವ ಮೂಲಕ ತಾವು ರಾಜಕೀಯಕ್ಕೆ ಬರೋಲ್ಲ ಅಂತಾ ಸೂಚನೆ ನೀಡಿದ್ರು.
ಅಲ್ಲದೆ ಅಮಿತ್ ಷಾ ರಾಜ್ಯಕ್ಕೆ ಬಂದಿರೋದು ಶೀಘ್ರ ಯೋಜನೆಯಲ್ಲ. ಎರಡು ವರ್ಷದ ಹಿಂದೆ ಅವರನ್ನು ಆಹ್ವಾನಿಸಲಾಗಿತ್ತು, ಆಗ ಸಮಯ ಕೂಡಿ ಬಂದಿರಲಿಲ್ಲ. ಅದರೀಗ ಸಮಯ ಕೂಡಿ ಬಂದಿದೆ. ಅಲ್ದೆ ಇಲ್ಲಿಯ ವರೆಗೂ ಬಂದು ಶ್ರೀಗಳ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿರೋದು ಖುಷಿ ತಂದಿದೆ ಎಂದರು.
ಒಟ್ಟಾರೆ ರಾಜ್ಯಕ್ಕೆ ಮೂರು ದಿನಗಳ ಭೇಟಿಗಾಗಿ ಅಮಿತ್ ಬಂದಿರೋದರ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆ ಎಂದು ಹೇಳಲಾಗ್ತಿದ್ದು, ಅದರಲ್ಲೂ ಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿರುವುದರ ಹಿಂದೆ ಶ್ರೀಗಳನ್ನು ರಾಜ್ಯ ರಾಜಕೀಯಕ್ಕೆ ಕರೆ ತಂದ ಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸ್ವಾಮೀಜಿಗಳ ಕೈ ನೀಡಲಾಗುತ್ತೆ ಎಂಬ ಮಾತುಗಳು ಹರಿದಾಡುತ್ತಿತ್ತು. ಆದರೆ ನಿರ್ಮಲಾನಂದ ಶ್ರೀಗಳು ತಮ್ಮ ಭಾಷಣದ ಮೂಲಕ ಅಮಿತ್ ಷಾ ರವರ ತಂತ್ರಗಾರಿಕೆಗೆ ಒಳಗಾಗದೆ ಬಹಿರಂಗವಾಗಿಯೇ ರಾಜಕೀಯಕ್ಕೆ ಬರಲು ನಿರಾಕರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.